ಶ್ರೀ ದುರ್ಗಾ ಡೆವಲಪರ್ಸ್‌ನಿಂದ ಟ್ಯಾಬ್ ಬಿಡುಗಡೆ

Sri
Published on

ಹುಬ್ಬಳ್ಳಿ: ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿ- ಧಾರವಾಡ ಮಹಾನಗರ ಇದೀಗ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹೊಸ ಆಯಾಮ ನೀಡುತ್ತ ಬಂದಿದ್ದು, ಇಡೀ ರಾಜ್ಯದ ಚಿತ್ತ ಅವಳಿನಗರದತ್ತ ನೆಡುವಂತೆ ಮಾಡಿದೆ.

ಈ ಮಾತಿಗೆ ಪುಷ್ಟಿ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಡಿಜಿಟಲ್ ಇಂಡಿಯಾದಂತಹ ಮಹತ್ವಪೂರ್ಣ ಅಭಿಯಾನ ಸಾಕಾರಗೊಳಿಸುವ ನಿಟ್ಟಿನಲ್ಲಿ ಐಎಸ್‌ಒ ಮಾನ್ಯತೆ ಹೊಂದಿರುವ ಶ್ರೀ ದುರ್ಗಾ ಡೆವಲಪರ್ಸ್ ಮತ್ತು ಪ್ರಮೋಟರ್ಸ್ ದಿಟ್ಟ ಹೆಜ್ಜೆಯನ್ನಿರಿಸಿದೆ.

ಹೌದು, ಸ್ವಾತಂತ್ರ್ಯೋತ್ಸವದ ಸವಿ ನೆನಪಿಗಾಗಿ ಶ್ರೀ ದುರ್ಗಾ ಡೆವಲಪರ್ಸ್, ಗ್ರಾಹಕರಿಗೆ ತಮ್ಮ ಯೋಜನೆಗಳ ಕುರಿತು ವಿಸ್ತೃತ ಮಾಹಿತಿ ನೀಡಲು ಕಂಪನಿಯ ವ್ಯವಸ್ಥೆಯಲ್ಲಿ ಟ್ಯಾಬ್ ಅಳವಡಿಸಿಕೊಳ್ಳುವ ಮೂಲಕ ಭಾರತ ಸರ್ಕಾರದ ಪೇಪರ್ ಲೆಸ್ ಕನಸು ನನಸಾಗಿಲು ಮುಂದಾಗಿದ್ದು ಗ್ರಾಹಕರ ಆಕರ್ಷಣೆಯ ಕೇಂದ್ರ ಬಿಂದುವಾಗಿ ಪರಿಣಮಿಸಿದೆ.

ವಸತಿ ಅಪಾರ್ಟ್‌ಮೆಂಟ್, ವಸತಿ ನಿವೇಶನ ಹಾಗೂ ವಾಣಿಜ್ಯ ಕಟ್ಟಡ ನಿರ್ಮಾಣದಲ್ಲಿ ತನ್ನದೇ ಛಾಪು ಮೂಡಿಸಿರುವ ಸಂಸ್ಥೆ ಹುಬ್ಬಳ್ಳಿ-ಧಾರವಾಡ ಉದ್ದಗಲಕ್ಕೂ ಶ್ರೀ ಸಾಮಾನ್ಯರು ಮನೆ ಹಾಗೂ ನಿವೇಶನ ಖರೀದಿಸಲು ವೇದಿಕೆ ಕಲ್ಪಿಸಿಕೊಟ್ಟಿದೆ. ಹತ್ತು ಹಲವು ಪ್ರಾಜೆಕ್ಟ್ ಗಳೊಂದಿಗೆ ಮುನ್ನುಗ್ಗುತ್ತಿರುವ ಸಂಸ್ಥೆಯು ಆಯಾ ಯೋಜನೆಗಳ ವಿಸ್ತೃತ ಮಾಹಿತಿಯನ್ನು ಗ್ರಾಹಕರೊಂದಿಗೆ ಎಳೆಎಳೆಯಾಗಿ ಹಂಚಿಕೊಳ್ಳಲು ಡಿಜಿಟಲ್ ಇಂಡಿಯಾದ ಭಾಗವಾಗಿ ಕಾರ್ಯ ನಿರ್ವಹಿಸಲು ಮುಂದಾಗುವ ಮೂಲಕ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತಂತ್ರಜ್ಞಾನದ ಕ್ರಾಂತಿಯನ್ನೆಬ್ಬಿಸಿದೆ.

ಗ್ರಾಹಕರಿಗೆ ಕಡಿಮೆ ಸಮಯದಲ್ಲಿ ಸಂಸ್ಥೆಯ ಸಕಲ ಪ್ರಾಜೆಕ್ಟೃ್ಗಳ ಮಾಹಿತಿಯನ್ನು ಕ್ಷಣ ಮಾತ್ರದಲ್ಲಿ ಒದಗಿಸಲು ಅತ್ಯಾಧುನಿಕ ತಂತ್ರಜ್ಞಾನದಿಂದ ತಯಾರಿಸಲ್ಪಟ್ಟಿರುವ ಟ್ಯಾಗ್ ನಿಜಕ್ಕೂ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಮತ್ತಷ್ಟು ಮೆರುಗು ತಂದು ಕೊಡಲಿದೆ ಎಂದು ಶ್ರೀ ದುರ್ಗಾ ಡೆವಲಪರ್ಸ್ ಮತ್ತು ಪ್ರಮೋಟರ್ಸ್ ವ್ಯವಸ್ಥಾಪಕ ನಿರ್ದೇಶಕ ವೀರೇಶ ಉಂಡಿ ಸಂತಸ ಹಂಚಿಕೊಂಡಿದ್ದಾರೆ.

ಅತಿ ಶೀಘ್ರದಲ್ಲಿಯೇ ಬೆಳಗಾವಿ, ವಿಜಯಪುರ, ಶಿವಮೊಗ್ಗದಲ್ಲಿ ಸಂಸ್ಥೆಯ ಶಾಖೆಗಳನ್ನು ಆರಂಭಿಸುವ ಮೂಲಕ ಪ್ರತಿಯೊಬ್ಬರೂ ಸೂರು ಹೊಂದಬೇಕೆನ್ನುವ ಕನಸು ನನಸಾಗಲು ಯತ್ನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net