ರೋಟರಿಯಿಂದ ವಿಶೇಷ ಮಕ್ಕಳಿಗಾಗಿ 'ತಾರೇ ಜಮೀನ್ ಪರ್'

Published on

ಮೈಸೂರು: ವಿಕಲಾಂಗ ವಿಶೇಷ ಮಕ್ಕಳಿಗಾಗಿ ರೋಟರಿ ಮೈಸೂರು ವತಿಯಿಂದ ನವೆಂಬರ್ 17ರಂದು ‘ತಾರೇ ಜಮೀನ್ ಪರ್’ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರೋಟರಿ ಮಾಜಿ ಪ್ರಾಂತಪಾಲ, ಉದ್ಯಮಿ ಆರ್.ಗುರು ಹೇಳಿದರು.

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಅಂದು ಬೆಳಗ್ಗೆ 7.30 ರಿಂದ ಸಂಜೆ ವರೆವಿಗೂ ವಿಶೇಷ ಮಕ್ಕಳು ತಮ್ಮ ಪ್ರತಿಭೆ ಪ್ರತ್ಯೇಕವಾಗಿ ಹಾಗೂ ಸಾಮೂಹಿಕವಾಗಿ ಪಾಲ್ಗೊಂಡು ಕಲೆ, ನಟನೆ, ನಾಟಕ, ಛದ್ಮವೇಶ, ಚಿತ್ರಕಲೆ, ನೃತ್ಯಗಳನ್ನು ಪ್ರದರ್ಶಿಸಲು ಅವಕಾಶ ನೀಡಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿಸದರು.

ವಿಶೇಷ ಮಕ್ಕಳು ಒಂದು ದಿನವನ್ನು ಅತ್ಯಂತ ತೃಪ್ತಿದಾಯಕ ಹಾಗೂ ಸಂತೋಷಭರಿತರಾಗಿ ಕಳೆಯುವಂತೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಹಲವು ವರ್ಷದಿಂದ ಇಂತಹ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದ್ದು, ಈ ಬಾರಿ 900 ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

ರೋಟರಿ ಮೈಸೂರು ಅಧ್ಯಕ್ಷ ಎನ್.ಪ್ರವೀಣ್, ಕಾರ್ಯದರ್ಶಿ ಕೆ.ಎನ್.ಸುಹಾಸ್, ಖಜಾಂಚಿ ಎಂ.ಸಿ.ಎಸ್.ಮನೋಹರ್, ಸದಸ್ಯ ಪೊನ್ನಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net