ನಿರ್ದೇಶಕ ಸ್ಥಾನಕ್ಕೆ ಟಿ.ಎ.ವಿಜಯಕುಮಾರ್ ಆಯ್ಕೆ

ಹುಣಸೂರು ತಾಲೂಕು ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಯ ನಿರ್ದೇಶಕರ ಚುನಾವಣೆಯಲ್ಲಿ ಭೂಮಾಪನ ಕಂದಾಯ ಇಲಾಖೆ ಭೂಮಾಪಕ ಟಿ.ಎ.ವಿಜಯಕುಮಾರ್ ಗೆದ್ದು ಚುನಾವಣಾಧಿಕಾರಿಯಿಂದ ಪ್ರಮಾಣಪತ್ರ ಸ್ವೀಕರಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಹೇಮಲತಾ, ಮಹದೇವ್, ಮೋಹನ್‌ರಾಜ್ ಇತರರಿದ್ದರು.
Published on

ಹುಣಸೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹುಣಸೂರು ಘಟಕದ ಕಾರ್ಯಕಾರಿ ಸಮಿತಿಯ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭೂಮಾಪನ ಕಂದಾಯ ಇಲಾಖೆ ವತಿಯಿಂದ ಸ್ಪರ್ಧಿಸಿದ್ದ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಭೂಮಾಪಕ ಟಿ.ಎ.ವಿಜಯಕುಮಾರ್ ಜಗ ಗಳಿಸಿದ್ದಾರೆ.

ಒಟ್ಟು 35 ಮತಗಳ ಪೈಕಿ 15 ಮತಗಳನ್ನು ಪಡೆದ ವಿಜಯಕುಮಾರ್ ಸಮೀಪದ ಪ್ರತಿಸ್ಪರ್ಧಿ ಎಂ.ಸುರೇಶ್ ಅವರನ್ನು ಮೂರು ಮತಗಳ ಅಂತರದಿಂದ ಸೋಲಿಸಿದ್ದಾರೆಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net