ಟಿ 10 ಕೆಪಿಎಲ್​ ಏ. 2ರಿಂದ

New Pme New
Published on

ಹುಬ್ಬಳ್ಳಿ : ಆರ್​.ಕೆ. ಟೈಗರ್ಸ್​ ಸ್ಪೋರ್ಟ್ಸ್​ ಕ್ಲಬ್​ ಮತ್ತು ವಿ.ಎ.ಕೆ. ೌಂಡೇಶನ್​ ಆಶ್ರಯದಲ್ಲಿ ಕರುನಾಡು ಪ್ರೀಮಿಯರ್​ ಲೀಗ್​ (ಕೆಪಿಎಲ್​) ಟಿ 10 ಟೆನ್ನಿಸ್​ಬಾಲ್​ ಹೊನಲು ಬೆಳಕಿನ ಕ್ರಿಕೆಟ್​ ಟೂರ್ನಾಮೆಂಟ್​ ಅನ್ನು ಏಪ್ರಿಲ್​ 2 ರಿಂದ 6ರವರೆಗೆ ನಗರದ ನೆಹರು ಮೈದಾನದಲ್ಲಿ ಆಯೋಜಿಸಲಾಗಿದೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಸ್ಪೋರ್ಟ್ಸ್​ ಕ್ಲಬ್​ನ ಅಧ್ಯಕ್ಷ ಕಿರಣ ಪವಾರ, ರಾಜ್ಯದ ವಿವಿಧ ಭಾಗಗಳಿಂದ ಆಯ್ಕೆಯಾಗಿರುವ 8 ಅತ್ಯುತ್ತಮ ತಂಡಗಳು ಟೂರ್ನಾಮೆಂಟ್​ನಲ್ಲಿ ಭಾಗವಹಿಸಲಿವೆ ಎಂದರು.

ಬೆಳಗ್ಗೆ 9 ರಿಂದ ರಾತ್ರಿ 10 ಗಂಟೆಯವರೆಗೆ ಪಂದ್ಯಾವಳಿ ನಡೆಯಲಿವೆ. ಏ. 2ರಂದು ಸಂಜೆ 5 ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್​ ಹಾಗೂ ಇತರರು ಭಾಗವಹಿಸುವರು ಎಂದು ತಿಳಿಸಿದರು.

ಉಪಾಧ್ಯಕ್ಷ ರಂಗನಗೌಡ ಚಿಕ್ಕನಗೌಡ್ರ, ಮಂಜುನಾಥ ಬದ್ದಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net