ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಟಿ.ಮಂಜಪ್ಪ ಆಯ್ಕೆ

ಫೋಟೋ ಶೀರ್ಷಿಕೆ 29 ಸಿಆರ್_ಪಿ-3 ಎ
ಚನ್ನರಾಯಪಟ್ಟಣ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಶಿಕ್ಷಕ ಟಿ.ಮಂಜಪ್ಪ ಅವರನ್ನು ಶಾಸಕ ಸಿ.ಎನ್. ಬಾಲಕೃಷ್ಣ ಸನ್ಮಾನಿಸಿದರು. ಕೃಷ್ಣೇಗೌಡ, ಸಿ.ಎನ್.ಪುಟ್ಟಸ್ವಾಮಿಗೌಡ, ರಮೇಶ್, ವೆಂಕಟೇಶ್ ಇತರರಿದ್ದರು.
Published on

ಚನ್ನರಾಯಪಟ್ಟಣ: ಇಲ್ಲಿನ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿ ಶಿಕ್ಷಕರಾದ ಟಿ.ಮಂಜಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದು, ಪಟ್ಟಣದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಪದಗ್ರಹಣ ಕಾರ್ಯಕ್ರಮ ಬುಧವಾರ ನಡೆಯಿತು.

5 ವರ್ಷಗಳ ಅವಧಿಯ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಅಧ್ಯಕ್ಷರಾಗಿದ್ದ ಆರೋಗ್ಯ ಇಲಾಖೆ ನೌಕರ ಲಕ್ಷ್ಮೀನಾರಾಯಣ ಅವರು ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ನೌಕರರ ಸಂಘದ ಪದಾಧಿಕಾರಿಗಳು, ಸಂಘದೊಂದಿಗೆ ದೀರ್ಘಾವಧಿ ಒಡನಾಟ ಹೊಂದಿದ್ದ ಶಿಕ್ಷಕ ಟಿ.ಮಂಜಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.

ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಿಗೆ ಶುಭ ಕೋರಿದ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ತಾಲೂಕಿನ ನೌಕರರಲ್ಲಿ ಸೌಹಾರ್ದತೆ, ಹೊಂದಾಣಿಕೆ ಮನೋಭಾವ ಇರುವುದರಿಂದಲೇ ಸಂಘವು ಸುಸೂತ್ರವಾಗಿ ನಡೆದುಕೊಂಡ ಸಾಗುತ್ತಿದೆ. ನಮ್ಮ ಸಲಹೆ ಪಡೆದು, ಉತ್ತಮ ದಾರಿಯಲ್ಲಿ ಹೋಗುವ ಸಂಘವು ರಾಜ್ಯಕ್ಕೆ ಮಾದರಿಯಾಗಿದೆ. ನೂತನ ಅಧ್ಯಕ್ಷ ಟಿ.ಮಂಜಪ್ಪ ಎಲ್ಲ ನೌಕರರ ಹಿತಕ್ಕಾಗಿ ಶ್ರಮಿಸಲಿ ಎಂದ ಅವರು, ನೌಕರ ವರ್ಗ ತಾಲೂಕಿನ ಅಭಿವೃದ್ಧಿಗೆ ಶ್ರಮಿಸುವಂತೆ ಮನವಿ ಮಾಡಿದರು.

ನೂತನ ಅಧ್ಯಕ್ಷ ಟಿ.ಮಂಜಪ್ಪ ಮಾತನಾಡಿ, ಎಲ್ಲ ನೌಕರರು, ಪದಾಧಿಕಾರಿಗಳು ನನಗೆ ಅಧ್ಯಕ್ಷಗಾದಿ ನೀಡಬೇಕು ಎಂಬ ಮಾತಿಗೆ ಇಂದು ಬೆಲೆ ಸಿಕ್ಕಿದೆ. ನೌಕರರು ನನ್ನ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿಕೊಂಡು ತಾಲೂಕಿಗೆ, ನಿಮ್ಮ ಮತ್ತು ಶಾಸಕರಿಗೆ ಗೌರವ ತರುವ ರೀತಿ ನಡೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣೇಗೌಡ ಮಾತನಾಡಿದರು. ಕರ್ನಾಟಕ ರಾಜ್ಯ ಮಾರಾಟ ಮಂಡಳಿ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮೀಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ರಮೇಶ್, ನಗರ ಪ್ರಾಧಿಕಾರ ಮಾಜಿ ಅಧ್ಯಕ್ಷ ವೆಂಕಟೇಶ್, ಬಿಇಒ ಎಚ್.ಎನ್.ದೀಪಾ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದೇವರಾಜೇಗೌಡ, ಮಾಜಿ ಅಧ್ಯಕ್ಷ ವಿ.ಎನ್.ದ್ಯಾವೇಗೌಡ, ಚಿಕ್ಕೆಗೌಡ, ಲಕ್ಷ್ಮೀನಾರಾಯಣ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net