

ತೇರದಾಳ: ಧರ್ಮ ಧರ್ಮಗಳ ನಡುವೆ ಭಿನ್ನಾಭಿಪ್ರಾಯಗಳನ್ನು ಹುಟ್ಟಿಸುವ ವ್ಯವಸ್ಥಿತವಾದ ಕುತಂತ್ರ ನಡೆಯುತ್ತಿದೆ. ಈಡಿ ಭಾರತೀಯ ಸಂಸ್ಕೃತಿಯ ವಿರುದ್ಧ ನಡೆಯುತ್ತಿರುವ ಕುತಂತ್ರ ಇದಾಗಿದೆ ಮುಖಂಡ ಸುರೇಂದ್ರ ಪಾಟೀಲ ಆರೋಪಿಸಿದರು.
ಮಂಗಳವಾರ ತಾಲೂಕಿನ ಸಸಾಲಟ್ಟಿ ಗ್ರಾಮದ ಶಿವಲಿಂಗೇಶ್ವರ ದೇವಸ್ಥಾನದಿಂದ ತಲಾಟಿ ಕಚೇರಿವರೆಗೆ ಪಾದಯಾತ್ರೆಯ ಮೂಲಕ ತೆರಳಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಮತ್ತು ಅಪಪ್ರಚಾರದ ವಿರುದ್ಧ ಕಠಿಣ ಕ್ರಮಕೊಳ್ಳುವಂತೆ ಒತ್ತಾಯಿಸಿ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ರಾಜ್ಯ ಸರ್ಕಾರಕ್ಕೆ ಬರೆಯಲಾದ ಮನವಿ ಪತ್ರವನ್ನು ಗ್ರಾಮ ಆಡಳಿತ ಅಧಿಕಾರಿಗೆ ಸಲ್ಲಿಸಲಾಯಿತು.
ಪತ್ರದಲ್ಲಿ ಕ್ಷೇತ್ರ ಧರ್ಮಸ್ಥಳ ಹಾಗೂ ಶ್ರೀಯುತ ವೀರೇಂದ್ರ ಹೆಗ್ಗಡೆಯವರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಹಾಗೂ ಅಪಪ್ರಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಮೂಲಕ ಧರ್ಮ ಹಾಗೂ ಭಾರತೀಯ ಸಂಸ್ಕೃತಿ ವಿರುದ್ಧ ನಡೆಯುತ್ತಿರುವ ಕುತಂತ್ರವನ್ನು ಕೊನೆಗಾಣಿಸಿಬೇಕು ಎಂದರು.
ಈ ಸಂದರ್ಭದಲ್ಲಿ ಹುಲೇಪ್ಪ ಹುಕ್ಕೇರಿ, ಮಲ್ಲೇಶ ಉಳ್ಳಾಗಡ್ಡಿ, ಗುರುಬಸು ಹುಕ್ಕೇರಿ, ಸಿಮಂತ ಶೇಗುಣಸಿ, ಬಾಹುಬಲಿ ಪಾಟೀಲ, ಮಡೆಪ್ಪ ಪಾಲಭಾಂವಿ, ಮುತ್ತು ಭದ್ರಶೆಟ್ಟಿ, ಜಕ್ಕಪ್ಪ ಜಲಪೂರ ಬನಪ್ಪ ಬೆವನೂರ, ಅಶೋಕ ಸಂತಿ, ಭೀಮಪ್ಪ ಯರಡತ್ತಿ, ಮಹೇಶ ಹೊಸಪೇಟಿ, ಗುರುಪಾದ ಶಿವಣ್ಣವರ ಇದ್ದರು.