ಬ್ರಾಹ್ಮಣರ ವಿರುದ್ಧ ವ್ಯವಸ್ಥಿತ ಷಡ್ಯಂತ್ರ

SDP Strike
Published on

ಸಿದ್ದಾಪುರ: ಸಿಇಟಿ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ತುಂಡರಿಸಿರುವುದು ಹಾಗೂ ಜನಿವಾರ ಧರಿಸಿ ಪರೀಕ್ಷೆ ಬರೆಯುವ ಅವಕಾಶ ನೀಡದಿರುವುದನ್ನು ಖಂಡಿಸಿ ತಹಸೀಲ್ದಾರ್ ಕಚೇರಿ ಎದುರು ಬ್ರಾಹ್ಮಣ ಸಮಾಜದವರು ಬುಧವಾರ ಪ್ರತಿಭಟನೆ ನಡೆಸಿದರು.

ಹವ್ಯಕ ಮಂಡಲದ ತಾಲೂಕು ಅಧ್ಯಕ್ಷ ಮಹೇಶ ಭಟ್ಟ ಚಟ್ನಳ್ಳಿ ಮಾತನಾಡಿ, ಇತ್ತೀಚೆಗೆ ಬ್ರಾಹ್ಮಣರನ್ನು ಅವಹೇಳನ ಮಾಡುವಂತಹ ಪ್ರಕರಣಗಳು ನಡೆಯುತ್ತಿವೆ. ಇಂಥ ಕೃತ್ಯಗಳು ಒಂದು ವ್ಯಕ್ತಿಯಿಂದ ಆಗಿದ್ದಲ್ಲ. ಏಕಕಾಲದಲ್ಲಿ ಜನಿವಾರವನ್ನು ತೆಗೆಸುವ ಕಾರ್ಯ ನಡೆದಿದೆ ಎಂದರೆ ಇದೊಂದು ಷಡ್ಯಂತ್ರವಾಗಿದೆ ಎಂದು ಹೇಳಿದರು.

ಡಾ.ಶಶಿಭೂಷಣ ಹೆಗಡೆ ಹೆಗಡೆ ಮಾತನಾಡಿ, ಜನಿವಾರ ತುಂಡರಿಸಿದ ಘಟನೆ ನೋಡಿದರೆ ಇದರ ಹಿಂದೆ ದೊಡ್ಡ ಕೈವಾಡ ಇದ್ದಂತೆ ಕಂಡುಬರುತ್ತಿದೆ ಎಂದರು.

ಜಿಎಸ್‌ಬಿ ಸಮಾಜದ ಪ್ರಮುಖ ಗುರುರಾಜ ಶಾನಭಾಗ ಮಾತನಾಡಿದರು.

ಅಖಿಲ ಭಾರತ ಹವ್ಯಕ ಸಮಾಜದ ಉಪಾಧ್ಯಕ್ಷ ಆರ್. ಎಂ. ಹೆಗಡೆ ಬಾಳೇಸರ, ಕೆ.ಜಿ.ನಾಯ್ಕ ಹಣಜೀಬೈಲ್, ರವಿ ಹೆಗಡೆ ಹೂವಿನಮನೆ, ಪ್ರಮುಖರಾದ ವಿನಾಯಕ ಶೇಟ್, ತಿಮ್ಮಪ್ಪ ಎಂ.ಕೆ, ಕಾಶಿನಾಥ ಪೈ, ರಾಜೇಂದ್ರ ಆಚಾರ್ಯ ಇತರರು ಮಾತನಾಡಿದರು. ಉಪತಹಸೀಲ್ದಾರ್ ಶಾಮಸುಂದರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಎಂ.ಎಂ. ಹೆಗಡೆ ಮಗೇಗಾರ, ಆರ್.ಎಸ್.ಭಟ್ಟ , ಎನ್.ವಿ. ಹೆಗಡೆ ಮುತ್ತಿಗೆ, ರಾಘವೇಂದ್ರ ಶಾಸ್ತ್ರಿ, ಮಂಜುನಾಥ ಭಟ್ಟ, ಎಂ.ವಿ.ಹೆಗಡೆ, ನಾರಾಯಣ ಹೆಗಡೆ, ವಿಜಯನಾರಾಯಣ ಹೆಗಡೆ, ಶ್ರೀಕಾಂತ ಭಟ್ಟ, ಜೈವಂತ ಶಾನಭಾಗ, ಜಿ.ಎಸ್.ಭಟ್ಟ, ಕಲ್ಪನಾ ತಲವಾಟ, ಜ್ಯೋತಿ ಹೆಗಡೆ, ವೀಣಾ ಶಿರಸಿ, ಶಾಂತಲಕ್ಷ್ಮೀ ಹೆಗಡೆ, ಗೀತಾ ಹೆಗಡೆ, ಸುಲೋಚನಾ ಭಟ್ಟ, ಜಯಂತಿ, ಕವಿತಾ ಭಟ್ಟ ಇತರರಿದ್ದರು. ಗಣಪತಿ ಹೆಗಡೆ ಗುಂಜಗೋಡ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net