ವಿಚಾರ ಸಂಕಿರಣ ನಾಳೆ

Vijayavani-Featured-Image
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕಿಟೆಲ್​ ವಿಜ್ಞಾನ ಕಾಲೇಜಿನಲ್ಲಿ ಜೂ. 13ರಂದು ಮಟಿರಿಯಲ್ಸ್​ ಾರ್​ ನಾವೆಲ್​ ಅಪ್ಲಿಕೇಷನ್ಸ್​ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಕ್ರಿಸ್ಟೋರ್​.ಆರ್​ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜಿನ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಸಂಕಿರಣದಲ್ಲಿ ಚಂದ್ರಯಾನ&3ರ ವಿಜ್ಞಾನಿ ಬಿ.ಎಚ್​.ಎಂ ದಾರುಕೇಶ ಚಂದ್ರಯಾನ&3 ಕುರಿತು ಮಾತನಾಡುವರು ಎಂದರು.
ಮಧ್ಯಾಹ್ನ 2 ಗಂಟೆಗೆ ಮುಂಬೈನ ಐಟಿಐ ಕಾಲೇಜಿನ ಪ್ರೊ. ರವೀಂದ್ರ ಕಾಂಬಳೆ ನ್ಯಾನೋ ಅಪ್ಲಿಕೇಶನಗಳ ಕುರಿತು ಮಾತನಾಡುವರು. 3.30ಕ್ಕೆ ಧಾರವಾಡ ಐಐಟಿ ನಿವೃತ್ತ ನಿರ್ದೇಶಕ ಎಸ್​.ಎಂ. ಶಿವಪ್ರಸಾದ ಅವರು ಆಪ್ಪೊ ಎಲೆಕ್ಟ್ರನಿಕ್ಸ್​ ಕುರಿತು ಮಾತನಾಡುವರು. ನಗರ ಹಾಗೂ ವಿವಿಧ ಜಿಲ್ಲೆಯ ಕಾಲೇಜುಗಳ ವಿದ್ಯಾಥಿರ್ಗಳು ಭಾಗವಹಿಸುವರು ಎಂದರು.
ಸಂಯೋಜಕ ಎ.ಎಲ್​. ಹರಿಹರ, ಪ್ರೊ. ಝೇವಿಯರ್​ ಗಾಮಾ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net