

ಮಂಗಳೂರು: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ದಕ್ಷಿಣ ಭಾರತೀಯ ಪ್ರಾದೇಶಿಕ ಮಂಡಳಿ ಮಂಗಳೂರು ಶಾಖೆ ವತಿಯಿಂದ ಆ.19 ರಂದು ಮಂಗಳೂರಿನ ಪಡೀಲ್‌ನಲ್ಲಿರುವ ಐಸಿಎಐ ಭವನಲ್ಲಿ ತೆರಿಗೆ ಲೆಕ್ಕಪರಿಶೋಧನೆಯ ಕುರಿತು ಒಂದು ದಿನದ ವಿಚಾರ ಸಂಕಿರಣ ಆಯೋಜಿಸಿತ್ತು.
ಲೆಕ್ಕಪರಿಶೋಧ ಡಾ. ಎನ್. ಸುರೇಶ್ ಬೆಂಗಳೂರು ಮತ್ತು ಲೆಕ್ಕಪರಿಶೋಧ ತರುಣ್ ಕೊಠಾರಿ ಮೈಸೂರು ಇವರು ಒಂದು ದಿನದ ಕಾರ್ಯಕ್ರಮದಲ್ಲಿ ದತ್ತಿ ಸಂಸ್ಥೆಗಳ ಲೆಕ್ಕಪರಿಶೋಧನೆಯ ಇತ್ತೀಚಿನ ಬೆಳವಣಿಗೆಗಳು ಮತ್ತು ಆದಾಯ ತೆರಿಗೆ ಕಾಯಿದೆ ಅಡಿಯಲ್ಲಿ ತೆರಿಗೆ ಲೆಕ್ಕಪರಿಶೋಧನೆಯ ವಿಮರ್ಶಾತ್ಮಕ ವಿಶ್ಲೇಷಣೆ ವಿಷಯಗಳ ಕುರಿತು ಮಾತನಾಡಿದರು.
ಈ ಒಂದು ದಿನದ ಕಾರ್ಯಕ್ರಮದಲ್ಲಿ ಚಾರ್ಟರ್ಡ್ ಅಕೌಂಟೆಂಟ್‌ಗಳು, ಚಾರ್ಟರ್ಡ್ ಅಕೌಂಟೆನ್ಸಿ ವಿದ್ಯಾರ್ಥಿಗಳು ಮತ್ತು ಇತರರನ್ನು ಒಳಗೊಂಡಿರುವ ಇನ್ನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.