

ಮೈಸೂರು: ಕೃಷ್ಣಮೂರ್ತಿಪುರಂನ ಶಾರದಾವಿಲಾಸ ಕಾಲೇಜಿನಲ್ಲಿ ಫೆ.24ರಂದು ಬೆಳಗ್ಗೆ 9ಕ್ಕೆ ‘ನ್ಯೂರೋ ಡಿಜನರೇಟಿವ್ ಡಿಸಾಡರ್ಸ್ ಆ್ಯಂಡ್ ಇನ್ಫ್ಲಮೆಷನ್’ ವಿಷಯದ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲೆ ಎಂ.ದೇವಿಕಾ ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್‌ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಮೆರಿಕದ ಪೆನ್ಸಿಲ್ವೇನಿಯ ಸ್ಟೇಟ್ ಯೂನಿರ್ವಸಿಟಿ ಉಪನ್ಯಾಸಕ ಕೆ.ಸಂದೀಪ್ ಪ್ರಭು ಮುಖ್ಯ ಭಾಷಣ ಮಾಡಲಿದ್ದಾರೆ. ಪ್ರಭು ಸೇರಿದಂತೆ ನಾಲ್ವರು ಸಂಪನ್ಮೂಲ ವ್ಯಕ್ತಿಗಳು ವಿಷಯ ಕುರಿತು ತಮ್ಮ ವಿಚಾರ ಮಂಡಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನರಮಂಡಲದ ಸಮಸ್ಯೆಯಿಂದ ಉಂಟಾಗುವ ಡಿಮೆನ್ಶಿಯಾ, ಅಲ್ಜೈಮರ್ ಮುಂತಾದ ಕಾಯಿಲೆಗಳು ಹಾಗೂ ಅದನ್ನು ನಿರ್ವಹಿಸುವ ವಿಧಾನಗಳ ಕುರಿತು ವಿಚಾರ ಸಂಕಿರಣ ಬೆಳಕು ಚೆಲ್ಲಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಬಿ.ಎಂ.ಯಶವಂತ್, ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಆರ್.ಎ. ಮಂಜುನಾಥ್, ಕನ್ನಡ ಉಪನ್ಯಾಸಕ ಆನಂದ್ ಇದ್ದರು.