

ಧಾರವಾಡ: ನಗರದ ಸಮುದಾಯ ತಂಡದ ವತಿಯಿಂದ ಸೌಹಾರ್ದ ಕರ್ನಾಟಕದತ್ತ ನಮ್ಮ ನಡೆ' ಪ್ರಯುಕ್ತ ವಿಚಾರ ಸಂಕಿರಣ, ಅಭಿನಂದನೆ, ನಾಟಕೋತ್ಸವ ಕಾರ್ಯಕ್ರಮವನ್ನು ಆ. ೨೬ ಹಾಗೂ ೨೭ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಮುದಾಯದ ಗೌರವಾಧ್ಯಕ್ಷ ಡಾ. ಶಿವಾನಂದ ಶೆಟ್ಟರ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮÁತನಾಡಿದ ಅವರು, ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆ. ೨೬ರಂದು ಮಧ್ಯಾಹ್ನ ೩ ಗಂಟೆಗೆ ಶಿವಮೊಗ್ಗದ ಚಿಂತಕ ಡಾ. ರಾಜೇಂದ್ರ ಚೆನ್ನಿ ಉದ್ಘಾಟಿಸುವರು. ರಂಗ ನಿರ್ದೇಶಕ ಸಿ. ಬಸಲಿಂಗಯ್ಯ ಆಶಯ ನುಡುಗಳನ್ನಾಡುವರು. ನಂತರಕರ್ನಾಟಕ ರಾಜಕಾರಣ: ಮುಂದಿನ ಸವಾಲುಗಳು' ಕರ್ನಾಟಕ ಅಭಿವೃದ್ಧಿ: ಮುಂದಿನ ದಾರಿ' ವಿಷಯ ಕುರಿತು ಗೋಷ್ಠಿ ಜರುಗಲಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಉಪಸ್ಥಿತರಿರುವರು. ಹಿರಿಯ ಸಾಹಿತಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು. ಸಂಜೆ ೬.೩೦ಕ್ಕೆ ಬೆಂಗಳೂರಿನ ಸಮುದಾಯ ತಂಡದಿAದತುಘಲಕ್' ನಾಟಕ ಪ್ರದರ್ಶನ ನಡೆಯಲಿದೆ ಎಂದರು.
೨೭ರAದು ಮಧ್ಯಾಹ್ನ ೩ ಗಂಟೆಗೆ ಚಿಂತಕ ಡಾ. ರಹಮತ್ ತರೀಕೆರೆ ಅವರು ಕರ್ನಾಟಕ ಸೌಹಾರ್ದ ಪರಂಪರೆ: ಇಂದಿನ ಬಿಕ್ಕಟ್ಟುಗಳು', ಡಾ. ವಿನಯÁ ಒಕ್ಕುಂದ ಅವರುಮಹಿಳೆ: ಸಮಕಾಲೀನ ಸವಾಲುಗಳು' ವಿಷಯ ಕುರಿತು ಮಾತನಾಡುವರು. ಸಮಯದಾಯ ಜಿಲ್ಲಾ ಅಧ್ಯಕ್ಷ ಬಿ.ಐ. ಈಳಿಗೇರ ಅವರು ೭೫ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದನೆ ಸಲ್ಲಿಸಿ, ಪುಸ್ತಕ ಬಿಡುಗಡೆ ಮÁಡಲಾಗುವುದು. ಸಂಜೆ ೬.೩೦ಕ್ಕೆ `ನಮ್ದು ಹಳೆ ಕಥಿ' ಎಂಬ ನಾಟಕವನ್ನು ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯ ಕಲಾವಿದರು ಪ್ರಸ್ತುತಪಡಿಸಲಿದ್ದಾರೆ ಎಂದರು.