ಇಂಟರ‌್ಯಾಕ್ಟ್ ಸಂಘದಿಂದ ವಿಚಾರ ಸಂಕಿರಣ

ಇಂಟರ‌್ಯಾಕ್ಟ್ ಸಂಘದಿಂದ ವಿಚಾರ ಸಂಕಿರಣ
Published on

ನಾಪೋಕ್ಲು: ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಇಂಟರ‌್ಯಾಕ್ಟ್ ಸಂಘದಿಂದ ವಿದ್ಯಾರ್ಥಿಗಳಿಗೆ ದೇವಧನ್ ಫೌಂಡೇಷನ್ ಮೈಸೂರು ವತಿಯಿಂದ ಇತ್ತೀಚೆಗೆ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು. ದೇವಧನ್ ಫೌಂಡೇಷನ್‌ನ ಬಲ್ಲಚಂಡ ಧನ್ಯಾ ಪೊನ್ನಮ್ಮ, ಕೋಟೆರ ದೇವಯ್ಯ ಹಾಗೂ ತಂಡದಿಂದ ವಿದ್ಯಾರ್ಥಿಗಳಿಗೆ ಏಕಾಗ್ರತೆ, ಖಿನ್ನತೆ ಹಾಗೂ ಆಕ್ರಮಣಕಾರಿ ವರ್ತನೆಯ ಬಗ್ಗೆ ಮಾಹಿತಿ ನೀಡಲಾಯಿತು. ಭವಿಷ್ಯ ಬದುಕಿಗೆ ರೂಪುರೇಷೆ ಕೈಗೊಳ್ಳಲು ಮಾರ್ಗದರ್ಶನ ನೀಡಲಾಯಿತು.

ಇಂಟರ‌್ಯಾಕ್ಟ್ ಸಂಘದ ಸಂಚಾಲಕಿ ಕೆ .ಎಸ್.ಶೋಭಾ, ಸ್ಮಿತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net