ಬೆಂಗಳೂರು ಬಂದ್‌ಗೆ ಸಾಂಕೇತಿಕವಾಗಿ ಚಾಲನೆ

28012022 Manvi Bandh protest
Published on

ಬೆಂಗಳೂರು: ರಾಜ್ಯ ಸರ್ಕಾರದ ಶಕ್ತಿಯೋಜನೆಯಡಿ ನಷ್ಟಕ್ಕೊಳಗಾಗಿರುವ ಖಾಸಗಿ ಸಾರಿಗೆ ಚಾಲಕರು-ಮಾಲೀಕರು ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸೆ.11 ರಂದು ಬೆಂಗಳೂರು ಬಂದ್‌ಗೆ ಕರೆ ಕೊಟ್ಟಿದ್ದು, ಮಂಗಳವಾರ ಬಂದ್‌ಗೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.
ಜಯನಗರದ ಶಾಲಿನಿ ಮೈದಾನದಲ್ಲಿ ಜಮಾಯಿಸಿದ ಸಂಘಟನೆಗಳು ಬೆಂಗಳೂರು ಬಂದ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿ ಸಕಲ ಸಿದ್ಧತೆ ನಡೆಸಿದೆ. ಅಷ್ಟೇ ಅಲ್ಲ, ಆಟೋ, ಟ್ಯಾಕ್ಸಿ ಹಾಗೂ ಕ್ಯಾಬ್ಗಳಿಗೆ ಕಪ್ಪು ಬಾವುಟ ಕಟ್ಟಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಯಾವ್ಯಾವ ವಾಹನಗಳು ಬಂದ್ ಆಗಲಿವೆ?
ಬೆಂಗಳೂರು ಬಂದ್‌ಗೆ ಕರೆ ಪೋಸ್ಟರ್ ಬಿಡುಗಡೆ ಮಾಡಿ, ಬಾವುಟ ಹಂಚಿಕೆ ಮಾಡಲಾಗಿದೆ. ಬಂದ್ ಸಂಬಂಧ 32 ಒಕ್ಕೂಟಗಳ ಅಧ್ಯಕ್ಷರು ಮತ್ತು ಸದಸ್ಯರು ಭಾಗಿಯಾಗಿದ್ದು, ಚಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಸೆ.11 ರಂದು ಆಟೋ, ಟ್ಯಾಕ್ಸಿ, ಮಿನಿ ಟ್ರಕ್, ಖಾಸಗಿ ಬಸ್‌ಗಳ ಸಂಚಾರ ಬಂದ್ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net