ತ್ಯಾಗ, ಸಹನೆ, ತಾಳ್ಮೆಯ ಪ್ರತೀಕ

jyp2
Published on

ಜಯಪುರ: ಜಯಪುರದ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಬಕ್ರೀದ್ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.

ಧರ್ಮ ಗುರುಗಳಾದ ಡಿ.ಎ.ಹಸನ್ ಸಖಾಫಿ ಮಾತನಾಡಿ, ತ್ಯಾಗ, ಸಹನೆ, ತಾಳ್ಮೆಯ ಪ್ರತೀಕವಾದ ಬಕ್ರೀದ್ ಹಬ್ಬದ ಪ್ರಯುಕ್ತ ಇಂದು ನಾವು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಪ್ರಪಂಚದ ನಾನಾ ಭಾಗಗಳಿಂದ ಮೆಕ್ಕಾವನ್ನು ಕೇಂದ್ರವಾಗಿಸಿ ಯಾತ್ರೆಗೈದು ಹಜ್ಜ್ ಎಂಬ ಪವಿತ್ರ ಕರ್ಮವನ್ನು ಮುಸ್ಲಿಮರು ನಿರ್ವಹಿಸುತ್ತಾರೆ. ಬಕ್ರೀದ್ ಹಬ್ಬದ ಆಚರಣೆಯಲ್ಲಿ ಯಾವುದೇ ಬಡವ, ಸಿರಿವಂತ, ಕರಿಯ ,ಬಿಳಿಯ ಎಂಬ ತಾರತಮ್ಯವಿರುವುದಿಲ್ಲ ಎಂದರು.

ಮಸೀದಿ ಅಧ್ಯಕ್ಷ ಅಬೂಬಕ್ಕರ್, ಸಹ ಕಾರ್ಯದರ್ಶಿ ಹುಮಾಯೂನ್ ಕಬೀರ್ ಮತು ಇಸ್ಮಾಯಿಲ್ ಮಕ್ಕಿಕೊಪ್ಪ, ಅಬ್ದುಲ್ ಲತ್ೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net