ವಚನ ಸಮಾನತೆಯ ಸಂಕೇತ

Symbol of equality of vows
ಜಮಖಂಡಿಯ ಓಲೇಮಠದಲ್ಲಿ ಕಾರ್ತಿಕ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ವಚನ ಕಾರ್ತಿಕೋತ್ಸವವನ್ನು ಉಗರಗೋಳ ನಿರ್ವಾಣೇಶ್ವರ ಮಠದ ಮಹಾಂತೇಶ್ವರ ಮಹಾಸ್ವಾಮಿಗಳು ಉದ್ಘಾಟಿಸಿದರು. ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯ ಸ್ವಾಮಿಗಳು, ಶಾಸಕ ಜಗದೀಶ ಗುಡಗುಂಟಿ ಇದ್ದರು.
Published on

ಜಮಖಂಡಿ: ವಚನ ಎಂದರೆ ಜ್ಞಾನದ ಜ್ಯೋತಿ, ಧರ್ಮದ ಜ್ಯೋತಿ. ವಚನ ಜ್ಯೋತಿ ಒಗ್ಗಟ್ಟು ಮತ್ತು ಸಮಾನತೆಯ ಸಂಕೇತ. ಜ್ಯೋತಿಗೆ ಜಾತಿಯಿಲ್ಲ ಎಂಬುದು ಬಸವಣ್ಣವರ ಸಂದೇಶವಾಗಿದೆ ಎಂದು ಉಗರಗೋಳ ನಿರ್ವಾಣೇಶ್ವರ ಮಠದ ಮಹಾಂತೇಶ್ವರ ಮಹಾಸ್ವಾಮಿಗಳು ಹೇಳಿದರು.

ಕಾರ್ತಿಕ ಮಾಸದ ನಿಮಿತ್ತ ನಗರದ ಓಲೇಮಠದಲ್ಲಿ ಭಾನುವಾರ ನಡೆದ ವಚನ ಕಾರ್ತಿಕೋತ್ಸವ ಉದ್ಘಾಟಿಸಿ, ಆಶೀರ್ವಚನ ನೀಡಿದರು.

ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿ, ಪಣತಿಯಲ್ಲಿ ಹಚ್ಚಿದ ದೀಪ ನಂದಬಹುದು. ಆದರೆ ವಚನದೀಪ ಸದಾಕಾಲ ಅಂತರಂಗದಲ್ಲಿ ಬೆಳಗುತ್ತದೆ ಎಂದರು.

ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಕಮಡೊಳ್ಳಿಯ ಶ್ರೀ ಗುರು ಲೋಚನೇಶ್ವರ ವಿರಕ್ತಮಠದ ಅಭಿನವ ರಾಚೋಟೇಶ್ವರ ದೇವರು ಮಹಾಸ್ವಾಮಿಗಳು, ಹಿರೇ ಆಸಂಗಿಯ ವೀರಬಸವ ದೇವರು ಮಹಾಸ್ವಾಮಿಗಳು, ಆಲಗೂರಿನ ಗಿರೀಶ ದೇವರು ಮಹಾಸ್ವಾಮಿಗಳು, ಶಾಸಕ ಜಗದೀಶ ಗುಡಗುಂಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net