

ಮೈಸೂರು: ಕಾಂಗ್ರೆಸ್ ನಗರ ಯುವ ಘಟಕದ ಅಧ್ಯಕ್ಷರಾಗಿ ಸೈಯದ್ ಅಬ್ರಾರ್ ಮರು ಆಯ್ಕೆಯಾಗಿದ್ದಾರೆ. ಕಳೆದ ಬಾರಿಯೂ ಆಯ್ಕೆಯಾಗಿದ್ದ ಸೈಯದ್ ಅಬ್ರಾರ್ ಮರು ಆಯ್ಕೆ ಬಯಸಿ ಫೆ.7ರಂದು ಕಣಕ್ಕೆ ಇಳಿದಿದ್ದರು. ಘಟಕದ ಮುಖಂಡರು, ಸದಸ್ಯರು ಮತದಾನ ಮಾಡಿದ್ದು, ಅಬ್ರಾರ್ ಅವರು 9263 ಮತಗಳನ್ನು ಪಡೆಯುವ ಮೂಲಕ ಎರಡನೇ ಬಾರಿಗೆ ಆಯ್ಕೆಯಾದರು. ಇವರ ಎದುರು ಸ್ಪರ್ಧಿಸಿದ್ದ ಸೌಸಿಲ್ 7200 ಮತಗಳನ್ನು ಪಡೆದು ಪರಾಭವಗೊಂಡರು.