8ರಂದು ಚಿತ್ರದುರ್ಗದಲ್ಲಿ ರಾಷ್ಟ್ರೀಯ ಲೋಕ ಅದಾಲತ್

sy vatavati, Chitradurga,
Published on

ಚಿತ್ರದುರ್ಗ: ಪ್ರಸಕ್ತ ವರ್ಷ ಐದು ರಾಷ್ಟ್ರೀಯ ಲೋಕ ಅದಾಲತ್‌ಗಳು ನಡೆಯಲಿವೆ. ಫೆ. 8 ರಂದು ಮೊದಲ ಅದಾಲತ್ ನಡೆಯಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ವೈ. ವಟವಟಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಬಾಕಿ ಇರುವ 28,465 ಪ್ರಕರಣಗಳ ಪೈಕಿ 5458ನ್ನು ಮೊದಲ ಅದಾಲತ್‌ಗೆ ಗುರುತಿಸಲಾಗಿದೆ. ಇದರಲ್ಲಿ 4500 ಇತ್ಯರ್ಥ ವಾಗುವ ಗುರಿ ಇದೆ. ಈಗಾಗಲೇ ಗುರುತಿಸಿದ ಪ್ರಕರಣಗಳ ಜತೆ ಹೆಚ್ಚುವರಿ ಕೇಸ್‌ಗಳನ್ನು ಕೈಗೆತ್ತಿಕೊಳ್ಳುವಂತೆ ವಕೀಲರಿಗೆ ಸೂಚಿಸಲಾಗಿದೆ ಎಂದರು.

ಅಕ್ರಮ ಮರಳು ಸಾಗಣೆ ಪ್ರಕರಣಗಳ ತಪ್ಪಿತಸ್ಥರಿಗೆ ದಂಡ ವಿಧಿಸುವ ಮೂಲಕ 250 ಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಲು ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ಸಹಕಾರ ಕೋರಲಾಗಿದೆ. ಕೆಲ ರೈತರು ಮರಳು ಸಾಗಿಸಿ ತಪ್ಪು ಮಾಡಿರಬಹುದು. ನಿರಂತರ ತಪ್ಪೆಸಗುವವರ ವಿಚಾರಣೆ ನ್ಯಾಯಾಲಯಗಳಲ್ಲಿ ಮುಂದುವರಿಯಲಿದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಟಿ. ಶಿವಣ್ಣ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಂ. ಅನಿಲ್‌ಕುಮಾರ್, ಕೋರ್ಟ್ ವ್ಯವಸ್ಥಾಪಕ ದೋನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net