ಸಾಧಕ ರೈಲ್ವೆ ಸಿಬ್ಬಂದಿಗೆ ಪ್ರಶಸ್ತಿ

SWR PRIZE NEW
Published on

ಹುಬ್ಬಳ್ಳಿ : ಕರ್ತವ್ಯ ಪ್ರಜ್ಞೆ ಮತ್ತು ವೃತ್ತಿಪರತೆಯಲ್ಲಿ ವಿಶೇಷ ಸಾಧನೆ ತೋರಿದ ನೈಋತ್ಯ ರೈಲ್ವೆ ವಲಯದ ಸಿಬ್ಬಂದಿಗೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಅವರು ಪ್ರಶಸ್ತಿ ನೀಡಿ, ಸನ್ಮಾನಿಸಿದರು.

ಗೂಡ್ಸ್ ರೈಲಿನ ವ್ಯಾಗನ್​ವೊಂದರ ಬಾಗಿಲು ತೆರೆದಿದ್ದನ್ನು ಗಮನಿಸಿ, ಅನಾಹುತ ತಪ್ಪಿಸಿದ ಹೊಳಲ್ಕೆರೆಯಲ್ಲಿ ಗ್ಯಾಂಗ್​ವೆುೕಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಮುಖೇಶ ಕುಮಾರ ಹಾಗೂ ರಾಮಗಿರಿ ಸ್ಟೇಷನ್ ಮ್ಯಾನೇಜರ್ ಆಕಾಶ ಚಿಕಿಟೆ ಖುಷಾಬ್, ರೈಲಿನ ಬೋಗಿಯೊಂದರಲ್ಲಿ ಕರ್ಕಶ ಶಬ್ಧ ಕೇಳಿ, ಅಧಿಕಾರಿಗಳಿಗೆ ಮಾಹಿತಿ ನೀಡಿದ ಬೆಂಗಳೂರಿನ ಕ್ಲರ್ಕ್ ರವಿ ಇ. ನಾಯ್ಡು, ರೈಲು ಸುರಕ್ಷತಾ ತಪಾಸಣೆ ಸಂದರ್ಭದಲ್ಲಿ ಪ್ರಾಥಮಿಕ ಸ್ಟ್ರಿಂಗ್ ಬ್ರೇಕೇಜ್ ಆಕ್ಸಲ್​ನಲ್ಲಿ ತಾಂತ್ರಿಕ ತೊಂದರೆ ಗಮನಿಸಿ, ರೈಲು ಚಲಿಸುವ ಸಂದರ್ಭದಲ್ಲಿ ಬೋಗಿಗಳು ಬೇರ್ಪಟ್ಟು ಅಪಾಯವಾಗುವುದನ್ನು ತಪ್ಪಿಸಿದ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ವಿುನಲ್​ನ ಜ್ಯೂನಿಯರ್ ಇಂಜಿನಿಯರ್ ಖಾದರ್​ನವಾಜ್ ಖಾನ್ ಹಾಗೂ ಟೆಕ್ನಿಷಿಯನ್ ಜೀತೇಂದ್ರಕುಮಾರ, ಗೂಡ್ಸ್​ರೈಲಿನ ವ್ಯಾಗನ್​ವೊಂದರಲ್ಲಿ ತಾಂತ್ರಿಕ ಸಮಸ್ಯೆ ಗಮನಿಸಿ, ಅಪಾಯ ತಪ್ಪಿಸಿದ ಕ್ಯಾನ್ಸುಲಿಂ ನಿಲ್ದಾಣದ ಗೇಟ್​ವ್ಯಾನ್ ಪ್ರಭಾತ ಕುಮಾರ ಮಂಡಲ್ ಅವರಿಗೆ ಪ್ರಶಸ್ತಿ ನೀಡಿ, ಸನ್ಮಾನಿಸಲಾಯಿತು.

ವಲಯದ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಯು. ಸುಬ್ಬರಾವ್, ಪ್ರಧಾನ ಮುಖ್ಯ ಸುರಕ್ಷತಾ ಅಧಿಕಾರಿ ಎ.ಪಿ. ಶಮಾ, ವಿವಿಧ ವಿಭಾಗಗಳ ಹಿರಿಯ ಅದಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net