ಸುರಕ್ಷತೆಗೆ ಆದ್ಯತೆ ನೀಡಿದ ನೈಋತ್ಯ ರೈಲ್ವೆ

SANJEEVA KISHORE
Published on

ಹುಬ್ಬಳ್ಳಿ : ಮೂಲ ಸೌಕರ್ಯ ಮತ್ತು ಸಂಪರ್ಕ ಅಭಿವೃದ್ಧಿಯಲ್ಲಿ ನೈಋತ್ಯ ರೈಲ್ವೆ ಅಸಾಧಾರಣ ಬೆಳವಣಿಗೆ ಹಾಗೂ ರೈಲು ಕಾರ್ಯುಚರಣೆಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಹೇಳಿದರು.

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಲಯದ ಕೇಂದ್ರ ಕಚೇರಿ ರೈಲ್ ಸೌಧದಲ್ಲಿ ಮಂಗಳವಾರದಂದು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕಳೆದ ಮೂರು ಹಣಕಾಸು ವರ್ಷಗಳಲ್ಲಿ ನೈಋತ್ಯ ರೈಲ್ವೆಯು ಪ್ರತಿ ವರ್ಷ 200 ಕಿ.ಮೀ.ಗಿಂತ ಹೆಚ್ಚು ಹೊಸ ಮಾರ್ಗ ಮತ್ತು ಜೋಡಿ ಮಾರ್ಗಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.

2022-23ರ ಆರ್ಥಿಕ ವರ್ಷದಲ್ಲಿ 46.7 ಮಿಲಿಯನ್ ಟನ್ ಮೂಲ ಸರಕು ಲೋಡಿಂಗ್ ಮಾಡಿದ್ದು, ಇದು ಇದುವರೆಗಿನ ಅತ್ಯಧಿಕ ಲೋಡಿಂಗ್ ಆಗಿದೆ. ಒಟ್ಟು 8,071 ಕೋಟಿ ರೂ. ಆದಾಯ ಗಳಿಸಿದ್ದು, ಇದು ನೈಋತ್ಯ ರೈಲ್ವೆ ವಲಯ ಪ್ರಾರಂಭವಾದಾಗಿನಿಂದ ಇದುವರೆಗಿನ ಅತಿ ಹೆಚ್ಚು ಆದಾಯವಾಗಿದೆ ಎಂದರು.

2022-23ರ ಆರ್ಥಿಕ ವರ್ಷದಲ್ಲಿ 874 ಕಿ.ಮೀ. ಟ್ರಾ್ಯಕ್​ಗಳನ್ನು ವಿದ್ಯುದ್ದೀಕರಿಸಲಾಗಿದೆ. ಇದು ಒಂದೇ ವರ್ಷದಲ್ಲಿ ನೈಋತ್ಯ ರೈಲ್ವೆ ವಲಯದಲ್ಲಿ ಅತೀ ಹೆಚ್ಚು ವಿದ್ಯುದ್ದೀಕರಣ ದಾಖಲೆಯಾಗಿದೆ ಎಂದರು.

ವಲಯದ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಯು.ಸುಬ್ಬರಾವ್, ವಿವಿಧ ಇಲಾಖೆಗಳ ಪ್ರಧಾನ ಮುಖ್ಯಸ್ಥರು, ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net