ನೈಋತ್ಯ ರೈಲ್ವೆಯಿಂದ ಅಣಕು ಕಾರ್ಯಾಚರಣೆ

railway mock
Published on

ಹುಬ್ಬಳ್ಳಿ: ರೈಲ್ವೆ ಅವಘಡ ಹಾಗೂ ಇನ್ನಿತರ ತುರ್ತು ಸಂದರ್ಭದಲ್ಲಿ ಕೈಗೊಳ್ಳಬಹುದಾದ ಸುರಕ್ಷಾ ಕ್ರಮಗಳ ಕುರಿತು ಇಲ್ಲಿಯ ರೈಲ್ವೆ ಸ್ಟೇಷನ್ ಯಾರ್ಡ್​ನಲ್ಲಿ ಶುಕ್ರವಾರ ಅಣಕು ಕಾರ್ಯಾಚರಣೆ ನಡೆಸಲಾಯಿತು.

ಎನ್​ಡಿಆರ್​ಎಫ್, ರಾಜ್ಯ ಪೊಲೀಸ್, ಅಗ್ನಿಶಾಮಕ, ಗೃಹ ರಕ್ಷಕ ದಳ, ರೆಡ್ ಕ್ರಾಸ್, ರೈಲ್ವೆ ಸಿವಿಲ್ ಡಿಫೆನ್ಸ್ ಆರ್ಗನೈಜೇಶನ್ ತಂಡಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು.

ರೈಲಿನ ಎರಡು ಬೋಗಿಗಳು ಹಳಿ ತಪ್ಪಿದ ಸನ್ನಿವೇಶವನ್ನು ಸೃಷ್ಟಿಸಲಾಯಿತು. ಪ್ರಯಾಣಿಕರ ರಕ್ಷಣೆ, ಗಾಯಾಳುಗಳಿಗೆ ವೈದ್ಯಕೀಯ ನೆರವು, ಆಸ್ಪತ್ರೆಗೆ ರವಾನೆ, ಮೃತ ಹಾಗೂ ಗಾಯಾಳುಗಳ ಸಂಬಂಧಿಗಳಿಗೆ ಮಾಹಿತಿ ತಿಳಿಸುವ, ಇತ್ಯಾದಿ ಚಟುವಟಿಕೆಗಳು ಕಾರ್ಯಾಚರಣೆಯ ಭಾಗವಾಗಿದ್ದವು.

ನೈಋತ್ಯ ರೈಲ್ವೆ ಪ್ರಧಾನ ಮುಖ್ಯ ಸುರಕ್ಷಾ ಅಧಿಕಾರಿ ಎ.ಪಿ. ಶರ್ಮಾ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಹಿರಿಯ ಅಧಿಕಾರಿಗಳಾದ ಹರೀಶ ಖರೆ, ವಿ.ಕೆ. ಅಗರ್ವಾಲ್, ಸಂತೋಷ ಕುಮಾರ ವರ್ವ, ಡಾ. ಉಷಾ ರಾಣಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net