ನೈಋತ್ಯ ರೈಲ್ವೆಗೆ ನೂತನ ಸಿಪಿಆರ್​ಒ

kanmadi
Published on

ಹುಬ್ಬಳ್ಳಿ: ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್​ಒ)ಯಾಗಿ ಡಾ. ಮಂಜುನಾಥ ಕನ್ಮಡಿ ಸೋಮವಾರ ಅಧಿಕಾರ ವಹಿಸಿಕೊಂಡರು.

ಇಂಡಿಯನ್ ರೈಲ್ವೆ ಟ್ರಾಫಿಕ್ ಸರ್ವಿಸ್​ನ 2013ನೇ ಬ್ಯಾಚ್​ನ ಅಧಿಕಾರಿಯಾಗಿರುವ ಡಾ. ಮಂಜುನಾಥ ಅವರು ಉಪ ಮುಖ್ಯ ವಾಣಿಜ್ಯ ವ್ಯವಸ್ಥಾಪಕ (ಪ್ರಯಾಣಿಕ ಸೇವೆ)ರಾಗಿದ್ದರು. ಹುಬ್ಬಳ್ಳಿ ಮತ್ತು ಮೈಸೂರು ವಿಭಾಗದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು.

ನಿರ್ಗಮಿತ ಸಿಪಿಆರ್​ಒ ಅನೀಶ್ ಹೆಗಡೆ ಅಧಿಕಾರ ಹಸ್ತಾಂತರಿಸಿದರು. ರೈಲ್ವೆ ಮಂಡಳಿಯ ಜಂಟಿ ನಿರ್ದೇಶಕ ಹುದ್ದೆಗೆ ಅನೀಶ್ ಹೆಗಡೆ ನಿಯುಕ್ತಿಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net