ನೈಋತ್ಯ ರೈಲ್ವೆಗೆ ಚಿನ್ನದ ಪದಕ

SWR NEW
Published on

ಹುಬ್ಬಳ್ಳಿ : ಪೂರ್ವ ರೈಲ್ವೆ ಕ್ರೀಡಾ ಸಂಸ್ಥೆ ಕೋಲ್ಕತ್ತಾದಲ್ಲಿ ಜೂ. 5 ರಿಂದ 9ರವರೆಗೆ ಆಯೋಜಿಸಿದ್ದ 63ನೇ ಆಲ್ ಇಂಡಿಯಾ ಇಂಟರ್ ರೈಲ್ವೆ ಅಕ್ವಾಟಿಕ್ಸ್ ಚಾಂಪಿಯನ್​ಶಿಪ್​ನಲ್ಲಿ ನೈಋತ್ಯ ರೈಲ್ವೆ ವಲಯದ ಪುರುಷರ ಅಕ್ವಾಟಿಕ್ (ಈಜು) ತಂಡ ಚಿನ್ನದ ಪದಕ ಪಡೆದಿದೆ.

ಈ ಸ್ಪರ್ಧೆಯಲ್ಲಿ ದೇಶದ ವಿವಿಧ ರೈಲ್ವೆ ವಲಯಗಳ ಒಟ್ಟು 17 ತಂಡಗಳು ಸ್ಪರ್ಧಿಸಿದ್ದವು. ನೈಋತ್ಯ ರೈಲ್ವೆ ವಲಯದ ಈಜು ತರಬೇತುದಾರ ಥಾಮಸ್ ಚೌರಾ ಮಾರ್ಗದರ್ಶನದಲ್ಲಿ ವಲಯದ 22 ಜನರು ಸ್ಪರ್ಧಿಸಿದ್ದರು.

ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಅವರು, ತಂಡದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net