ಕತ್ತಿ ಕಾಲೇಜು ವಿದ್ಯಾರ್ಥಿಗಳ ಸಾಧನೆಗೆ ಪವನ ಖುಷ್

3
ಪವನ ಕತ್ತಿ
Published on

ಹುಕ್ಕೇರಿ: ತಾಲೂಕಿನ ಬೆಲ್ಲದ ಬಾಗೇವಾಡಿಯ ಮಹಾಂತೇಶ್ವರ ವಿದ್ಯಾ ಟ್ರಸ್ಟ್‌ನ ವಿಶ್ವನಾಥ ಕತ್ತಿ ಪ್ರಥಮ ದರ್ಜೆ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪದವಿ ವಿದ್ಯಾರ್ಥಿಗಳು ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಸೆಪ್ಟೆಂಬರ್/ಅಕ್ಟೋಬರ್‌ನಲ್ಲಿ ನಡೆಸಿದ ಪದವಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಸಂಸ್ಥೆ ಮಾರ್ಗದರ್ಶಕ ಪವನ ಕತ್ತಿ ಹೇಳಿದರು.

ಬೆಲ್ಲದಬಾಗೇವಾಡಿಯ ಮಹಾವಿದ್ಯಾಲಯದ ಆವರಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿ.ಎಸ್ಸಿ ಅಂತಿಮ ವಿಭಾಗದಲ್ಲಿ ಶೇ.100 ಹಾಗೂ ಬಿ.ಕಾಂ ವಿಭಾಗದಲ್ಲಿ ಶೇ.88 ತೇರ್ಗಡೆ ಹೊಂದಿದ್ದಾರೆ. ಬಿ.ಎಸ್ಸಿ ವಿಭಾಗದಲ್ಲಿ ಶೇ.91.35 ಅಂಕ ಪಡೆದು ವಿದ್ಯಾಶ್ರೀ ವಿಭೂತಿ ಪ್ರಥಮ, ಶೇ. 82.71 ಅಂಕ ಪಡೆದು ಪೂಜಾ ರಕ್ಷಿ ದ್ವಿತೀಯ ಮತ್ತು ಶೇ. 82.20 ಅಂಕ ಪಡೆದು ರೋಹಿಣಿ ಪಾಟೀಲ ತೃತೀಯ ಸ್ಥಾನ ಪಡೆದಿದ್ದಾರೆ.

ಬಿ.ಕಾಂ ವಿಭಾಗದಲ್ಲಿ ಶೇ. 93.61 ಅಂಕ ಪಡೆದು ಕಾವೇರಿ ಪಾಟೀಲ ಪ್ರಥಮ, ಶೇ. 93.59 ಅಂಕ ಪಡೆದು ಅಶ್ವಿನಿ ಕುಗಟೋಳಿ ದ್ವಿತೀಯ ಮತ್ತು ಶೇ.93.52 ಅಂಕ ಪಡೆದು ಪಲ್ಲವಿ ಪದ್ದಿ ತೃತೀಯ ಸ್ಥಾನ ಗಳಿಸಿ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ ಎಂದರು. ಪ್ರಾಚಾರ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net