ಕತ್ತಿ ಸಹೋದರರ ಕೊಡುಗೆ ಶ್ಲಾಘನೀಯ

14ckd1-WEb
ಹುಕ್ಕೇರಿ ತಾಲೂಕಿನ ರಕ್ಷಿ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹೀರಾ ಶುಗರ್ಸ್‌ ನೂತನ ನಿರ್ದೇಶಕ ಅಜ್ಜಪ್ಪ ಕಲ್ಲಟ್ಟಿ ಅವರನ್ನು ಗ್ರಾಮಸ್ಥರು ಬರಮಾಡಿಕೊಂಡರು.
Published on

ಹುಕ್ಕೇರಿ: ನಾಡಿನ ಪ್ರತಿಷ್ಠಿತ ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ತೆರವಾದ ನಿರ್ದೇಶಕ ಸ್ಥಾನವನ್ನು ಮರಳಿ ಸುಲ್ತಾನಪುರ ಪಂಚಾಯಿತಿ ವ್ಯಾಪ್ತಿಗೆ ಶಾಸಕ ಉಮೇಶ ಕತ್ತಿ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಸಹೋದರರು ನೀಡಿರುವುದು ರೈತರಲ್ಲಿ ಸಂತಸ ಹೆಚ್ಚಿಸಿದೆ ಎಂದು ತಾಪಂ ಸದಸ್ಯ ರಾಜು ಕಲ್ಲಟ್ಟಿ ಹೇಳಿದ್ದಾರೆ.

ತಾಲೂಕಿನ ರಕ್ಷಿ ಗ್ರಾಮದ ವೃತ್ತದಲ್ಲಿ ಬುಧವಾರ ಹೀರಾ ಶುಗರ್ಸ್‌ ನಿರ್ದೇಶಕ ಅಜ್ಜಪ್ಪ ಕಲ್ಲಟ್ಟಿ ಅವರನ್ನು ಸತ್ಕರಿಸಿ ಮಾತನಾಡಿದ ಅವರು, ಎರಡು ವರ್ಷಗಳ ಹಿಂದೆ ಕಾರ್ಖಾನೆ ಹಿರಿಯ ನಿರ್ದೇಶಕ ಅವರಗೋಳ ಗ್ರಾಮದ ಬಸವಣ್ಣಿ ಸರನಾಯಿಕ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನೊಗನಿಹಾಳ ಗ್ರಾಮದ ರೈತನಾಯಕ ಅಜ್ಜಪ್ಪ ಕಲ್ಲಟ್ಟಿ ಅವರ ಆಯ್ಕೆಗೆ ಕತ್ತಿ ಸಹೋದರರು ಆಡಳಿತ ಮಂಡಳಿಗೆ ಸಲಹೆ ನೀಡಿ, ನಮ್ಮ ಭಾಗಕ್ಕೆ ಆದ್ಯತೆ ನೀಡಿದ್ದಾರೆ ಎಂದರು. ತಾಪಂ ಮಾಜಿ ಅಧ್ಯಕ್ಷ ಈರಣ್ಣ ಹೂಗಾರ, ಬಿಜೆಪಿ ರೈತ ಮೋರ್ಚಾ ತಾಲೂಕಾಧ್ಯಕ್ಷ ರವೀಂದ್ರ ಹಿಡಕಲ್ ಮಾತನಾಡಿದರು.

ತಮ್ಮಣ್ಣ ಕರಗುಪ್ಪಿ, ಚಿದಾನಂದ ಗೌಡಾಡಿ, ಮಲ್ಲಿಕಾರ್ಜುನ ತೇರಣಿ, ಬಸವರಾಜ ತಳವಾರ, ಸಿದ್ರಾಮ ಮುಗಳಿ, ಮಹೇಶ ಬಡಗಾಂವಿ, ಸದಾಶಿವ ಕರಗುಪ್ಪಿ, ಅಪ್ಪಾಸಾಹೇಬ ಕಿಲ್ಲೇದಾರ, ರವೀಂದ್ರ ಕಲ್ಲಟ್ಟಿ, ಸಹಕಾರಿ ಧುರೀಣ ಶ್ರೀಶೈಲ ಮಠಪತಿ, ಬಸವಂತ ರಡ್ಡಿ, ಶಿವನಗೌಡ ಮದವಾಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net