

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಪಂಚಮಸಾಲಿ ಸಮಾಜದ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಸರ್ಕಾರ ಮಾಡುತ್ತಿದೆ. ಮಂಗಳವಾರ ಸಮಾವೇಶದ ವೇಳೆ ಪಂಚಮಸಾಲಿ ಹೋರಾಟಗಾರ ಮೇಲೆ ಲಾಠಿಚಾಜ್೯ ನಡೆಸಿರುವುದು ಪೊಲೀಸ್ ಅಧಿಕಾರಿಗಳು ಪೂರ್ವನಿಯೋಜಿತ ಕೃತ್ಯ ಎಂದು ಕೂಡಲಸಂಗದಮ ಬಸವಜಯ ಮೃತ್ಯುಂಜಯ ಸ್ವಾಮೀಜಿ ದೂರಿದರು.
ನಗರದ ಗಾಂಧಿಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುವರ್ಣ ವಿಧಾನಸೌದ ಬಳಿ ಕೊಂಡಸಕೊಪ್ಪದಲ್ಲಿ ಮೀಸಲಾತಿಗಾಗಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಲಿಲ್ಲ. ಮಾತುಕತೆಗೆ ಕೂಡ ಯಾರನ್ನು ಆಹ್ವಾನಿಸಲಿಲ್ಲ. ಬದಲಾಗಿದೆ ಪೊಲೀಸರು ಮೂಲಕ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದರು. ಪೊಲೀಸರು ಮಾರುವೇಷದಲ್ಲಿ ಬಂದು ನಮ್ಮ ಹೋರಾಟಗಾರರು ಮೇಲೆ ಕಲ್ಲು ತೂರಾಟ ನಡೆಸಿದರು. ಬಳಿಲ ಲಾಠಿಚಾಜ್೯ ಮಾಡಿದರು. ಇದೆಲ್ಲ ಘಟಕಗಳು ಗಮನಿಸಿದರೆ ಇದು ಪೂರ್ವನಿಯೋಜಿತ ಎಂದು ಅನುಮಾನ ವ್ಯಕ್ತವಾಗಿದೆ ಎಂದರು.