ಮಹಿಳೆಯ ಬಣ್ಣದ ಮಾತು ನಂಬಿ 19.80 ಲಕ್ಷ ರೂ. ವಂಚನೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಮಹಿಳೆಯ ಬಣ್ಣದ ಮಾತನ್ನು ನಂಬಿದ ವ್ಯಕ್ತಿಯೊಬ್ಬರು ಹೂಡಿಕೆ ಮಾಡಿ 19.80ಲಕ್ಷ ರೂ. ವಂಚನೆಗೊಳಗಾದ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇನ್‌ಸ್ಟಾಗ್ರಾಂನಲ್ಲಿ ಶೇರು ಮಾರುಕಟ್ಟೆ ಸಂಬಂಧಿಸಿದ ಜಾಹೀರಾತು ನೋಡುತ್ತಿರುವಾಗ ಅನನ್ಯ ಕುಲಕರ್ಣಿ ಎಂಬ ಹೆಸರಿನ ಅಪರಿಚಿತ ಮಹಿಳೆ ವಾಟ್ಸಪ್ ಸಂದೇಶವನ್ನು ಹಾಕಿದ್ದಳು. ಬಳಿಕ ಲಿಂಕ್‌ವೊಂದನ್ನು ಕಳುಹಿಸಿ ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಹಣ ದೊರಕಬಹುದೆಂದು ತಿಳಿಸಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿದ್ದಾರೆ. ಅದರಂತೆ ದೂರುದಾರರು ಸದ್ರಿ ಲಿಂಕ್ ಮುಖಾಂತರ ಪ್ರವೇಶಿಸಿದಾಗ ಅವರ ಹೆಸರಿನಲ್ಲಿ ಅಕೌಂಟ್ ತೋರಿಸುತ್ತಿದ್ದು ಅದರಲ್ಲಿ ಹಣ ಹೂಡಿಕೆ ಮಾಡುವ ಆಪ್ಸನ್ ಇತ್ತು. ಆ ಲಿಂಕ್ ಆ್ಯಪ್ ಮುಖಾಂತರ ಹಂತ ಹಂತವಾಗಿ 19.80ಲಕ್ಷ ರೂ.ಗಳನ್ನು ಅಪರಿಚಿತ ವ್ಯಕ್ತಿಯ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಬಳಿಕ ಮೋಸ ಹೋಗಿರುವುದು ಗೊತ್ತಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net