ಈಜು, ಕುಸ್ತಿ ಸ್ಪರ್ಧೆಯಲ್ಲಿ ಸರ್ಕಾರಿ ಶಾಲೆಯ ಹೈಕ್ಳ ಭರ್ಜರಿ ಸಾಧನೆ

Sports
Published on

ಮಂಡ್ಯ: ನಗರದ ಪಿಇಟಿ ಈಜುಕೊಳದಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ತಾಲೂಕಿನ ದುದ್ದ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ವಿದ್ಯಾರ್ಥಿಗಳು ಪ್ರಥಮ ಸ್ಥಾನದೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಾಲೆಯ ಕೆ.ವೈ.ಯಶ್ವಂತ್, ರಾಜೇಶ, ಎಂ.ಸಿ.ದೇವರಾಜು, ಎಸ್.ಸಿದ್ದಾರ್ಥ ಸ್ಪರ್ಧೆಯಲ್ಲಿ ಸಾಧನೆ ಮಾಡಿದ್ದಾರೆ. ಅಂತೆಯೇ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ. ಹೇಮಂತ್, ಬಿ.ಬಿ.ಯಶ್ವಂತ್, ಎಚ್.ಎಸ್. ಯೋಗೇಶ್, ಕೆ.ವೈ.ಯಶ್ವಂತ್, ಸೃಜನ್, ಶ್ರೀರಕ್ಷಾ ಅವರು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದರೆ, ಎಚ್.ವಿ. ನಂದೀಶ್, ಸಿ.ಐಶ್ವರ್ಯಾ, ಡಿ.ಎಸ್.ಸೋನು, ಎಂ.ಎಸ್.ವಿನುತಾ, ಸೌಂದರ್ಯ, ರಾಮ, ಎಂ.ಭೂಮಿಕಾ, ಬಿ.ಎಸ್.ಪಲ್ಲವಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net