ಈಜುಕೊಳ ಸ್ಥಳಾಂತರಕ್ಕೆ ಗಡುವು

web3
ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹಾಗೂ ಜಿಪಂ ಮಾಜಿ ಸದಸ್ಯ ಬಿ.ಎಂ.ಚಿಕ್ಕನಗೌಡರ ನೇತತ್ವದಲ್ಲಿ ಬೈಲಹೊಂಗಲ ಎಸಿ ಪ್ರಭಾವತಿ ಕೀರಪುರ ಅವರಿಗೆ ಮನವಿ ಸಲ್ಲಿಸಲಾಯಿತು. ಮಡಿವಾಳಪ್ಪ ಹೋಟಿ, ಆನಂದ ಮೂಗಿ, ವಿಜಯ ಪತ್ತಾರ, ಜಗದೀಶ ಜಂಬಗಿ ಇತರರು ಇದ್ದರು.
Published on

ಬೈಲಹೊಂಗಲ: ಪಟ್ಟಣದ ಮಿನಿ ವಿಧಾನಸೌಧ ಎದುರಿನ ಬಸವ ಉದ್ಯಾನದಲ್ಲಿ ನಿರ್ಮಿಸುತ್ತಿರುವ ಈಜುಕೊಳ ಸ್ಥಳಾಂತರಿಸಲು 10 ದಿನ ಗಡುವು ನೀಡುತ್ತಿದ್ದೇವೆ.

ಯಾವುದೇ ಕ್ರಮ ತೆಗೆದುಕೊಳ್ಳದೆ ಕಾಮಗಾರಿ ಮುಂದುವರಿಸಿದರೆ ರಾಷ್ಟ್ರೀಯ ಬಸವ ದಳ ಹಾಗೂ ಸಮುದಾಯದ ನಾಯಕರು ಸೇರಿ ಉದ್ಯಾನದಲ್ಲಿ ಸತ್ಯಾಗ್ರಹ ಪ್ರಾರಂಭಿಸುತ್ತೇವೆ ಎಂದು ಆಗ್ರಹಿಸಿ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹಾಗೂ ಜಿಪಂ ಮಾಜಿ ಸದಸ್ಯ ಬಿ.ಎಂ. ಚಿಕ್ಕನಗೌಡರ ನೇತತ್ವದಲ್ಲಿ ಎ00 ಪ್ರಭಾವತಿ ಕೀರಪುರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಪಟ್ಟಣದ ಲೋಕೋಪಯೋಗಿ ಇಲಾಖೆ ಅಧೀನದಲ್ಲಿರುವ ಬಸವ ಉದ್ಯಾನದಲ್ಲಿ ಕ್ರೀಡಾ ಇಲಾಖೆಯ ವತಿಯಿಂದ ಈಜುಕೊಳ ನಿರ್ಮಿಸುತ್ತಿದ್ದು, ಕಾಮಗಾರಿಯನ್ನು ತಕ್ಷಣ ಸ್ಥಳಾಂತರಿಸಬೇಕು. ಮಿನಿವಿಧಾನಸೌಧಕ್ಕೆ ಕೆಲಸ ನಿಮಿತ್ತ ಬರುವ ಸಾರ್ವಜನಿಕರಿಗೆ ವಿಶ್ರಾಂತಿ ಪಡೆಯಲು ಸೂಕ್ತ ಸ್ಥಳವಾಗಿದೆ. ಇಲ್ಲಿ ಏಕಾಏಕಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 3 ಕೋಟಿ ರೂ. ವೆಚ್ಚದಲ್ಲಿ ಈಜುಕೊಳ ನಿರ್ಮಿಸಲಾಗುತ್ತಿದೆ. ಶೀಘ್ರ ಬೇರೆಡೆ ಸ್ಥಳಾಂತರ ಮಾಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಜಿಪಂ ಮಾಜಿ ಸದಸ್ಯ ಬಿ.ಎಂ.ಚಿಕ್ಕನಗೌಡರ ಮಾತನಾಡಿದರು. ಮಡಿವಾಳಪ್ಪ ಹೋಟಿ, ಆನಂದ ಮೂಗಿ, ವಿಜಯ ಪತ್ತಾರ, ಜಗದೀಶ ಜಂಬಗಿ, ಶಿವಾನಂದ ಕೋಲಕಾರ, ಅಶೋಕ ಗುಂಡ್ಲೂರ, ಚಂದನ ಕೌಜಲಗಿ, ಶ್ರೀಕಾಂತ ಶಿರಹಟ್ಟಿ, ರಾಜು ಬೋಳಣ್ಣವರ, ಮಡಿವಾಳಪ್ಪ ಚಿಕ್ಕೊಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net