ಬಾಲವನ ಈಜುಕೊಳ ಪುನರಾರಂಭ, ಎಲ್ಲ ವಯೋಮಾನದವರಿಗೂ ಮುಕ್ತ ಪ್ರವೇಶಕ್ಕೆ ಅವಕಾಶ

swimming new
Published on

ಪುತ್ತೂರು: ಕೋವಿಡ್ ಕಾರಣದಿಂದ 10 ತಿಂಗಳಿನಿಂದ ಸ್ಥಗಿತಗೊಂಡಿದ್ದ ಪರ್ಲಡ್ಕ ಶಿವರಾಮ ಕಾರಂತ ಬಾಲವನದ ಈಜುಕೊಳ ಫೆ.8ರಿಂದ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರಿಗೆ ಮುಕ್ತ ಪ್ರವೇಶಕ್ಕೆ ಸರ್ಕಾರ ಅನುಮತಿ ನೀಡಿದೆ.

ಸಂಪೂರ್ಣ ಚಟುವಟಿಕೆ ಸ್ಥಗಿತವಾಗಿದ್ದ ಬಾಲವನದ ಈಜುಕೊಳಕ್ಕೆ ಇತ್ತೀಚೆಗೆ ವಯೋಮಿತಿ ನಿಗದಿಪಡಿಸಿ ಪುತ್ತೂರು ಅಕ್ವಟಿಕ್ ಕ್ಲಬ್‌ನ ಸದಸ್ಯ ಈಜುಪಟುಗಳಿಗೆ ಮಾತ್ರ ಪುತ್ತೂರು ಸಹಾಯಕ ಆಯುಕ್ತರು ಅನುಮತಿ ನೀಡಿದ್ದರು. ಈಗ ಸರ್ಕಾರ ನಿಯಮ ಸಡಿಲಗೊಳಿಸಿದ ಕಾರಣ ಎಲ್ಲ ವಯೋಮಾನದ ಈಜುಪಟುಗಸು ಹಾಗೂ ಸಾರ್ವಜನಿಕರಿಗೆ ಪ್ರವೇಶ ನೀಡಲಾಗಿದೆ.

2002ರಲ್ಲಿ ಆರಂಭಗೊಂಡ ಈ ಈಜುಕೊಳ ರಾಜ್ಯ ಈಜು ಅಸೋಶಿಯೇಶನ್ ನಡೆಸುವ ರಾಜ್ಯಮಟ್ಟದ ಈಜು ಸ್ಫರ್ಧೆಗೆ ಅರ್ಹತೆ ಪಡೆದ ಕರಾವಳಿಯ ಏಕೈಕ ಈಜುಕೊಳ. ಅಂತಾರಾಷ್ಟ್ರೀಯ ಲೈಫ್ ಸೇವಿಂಗ್ ಸೊಸೈಟಿಯ ಮಾನ್ಯತೆ ಪಡೆದ ಈ ಸ್ವಿಮ್ಮಿಂಗ್ ೂಲ್‌ನಲ್ಲಿ ಈವರೆಗೆ 8 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳಿಗೆ ತರಬೇತಿ ನೀಡಲಾಗಿದೆ.

ನೇವಿ ಕ್ರೀಡಾಪಟುಗಳಿಗೆ ತರಬೇತಿ

ಈಜುಕೊಳ 21 ಮೀ. ಅಗಲ ಹಾಗೂ 25ಮೀ. ಉದ್ದವಿರುವ ಈಜುಕೊಳ ಪುನರಾರಂಭಗೊಂಡಿದ್ದರಿಂದ 30 ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟುಗಳು, 4 ಭಾರತ ನೇವಿ ವಿಭಾಗದ ಕ್ರೀಡಾಳುಗಳು ತರಬೇತಿ ಪಡೆಯಲು ಹೆಚ್ಚು ಸಹಕಾರಿಯಾಗಿದೆ.

ಲಾಕ್‌ಡೌನ್ ಹಾಗೂ ನಂತರ ಪುತ್ತೂರು ಬಾಲವನ ಈಜುಕೊಳ ಪ್ರವೇಶ ಇಲ್ಲದಿರುವುದರಿಂದ ಅಗತ್ಯವಿರುವ ಪ್ರಮುಖ ಕ್ರೀಡಾಪಟುಗಳಿಗೆ ವಾರಣಾಸಿ ಾರ್ಮ್‌ನಲ್ಲಿ ಸಾಮಾನ್ಯ ತರಬೇತಿ ನೀಡಲಾಗುತ್ತಿತ್ತು. ಈಜುಕೊಳ ತರಬೇತಿಗೆ ಮುಕ್ತಗೊಂಡಿದ್ದರಿಂದ ತರಬೇತಿ ಕಾರ್ಯ ಯಥಾಸ್ಥಿತಿಯಲ್ಲಿ ನಡೆಯಲಿದೆ.

ಪಾರ್ಥ ವಾರಣಾಸಿ, ಅಂತಾರಾಷ್ಟ್ರೀಯ ಈಜುಪಟು, ಬಾಲವನ ಈಜು ತರಬೇತುದಾರ

ಸರ್ಕಾರದ ನಿಯಮದನ್ವಯ ಬಾಲವನ ಈಜುಕೊಳ ಸ್ಥಗಿತಗೊಂಡಿದ್ದು, ಪ್ರಸ್ತುತ ಸರ್ಕಾರ ಈಜುಕೊಳಗಳಿಗೆ ನಿರ್ಬಂಧ ನಿಯಮ ಸಡಿಲಗೊಳಿಸಿದ್ದರಿಂದ ಫೆ.8ರಿಂದ ಸಾರ್ವಜನಿಕರಿಗೆ ಮುಕ್ತ ಪ್ರವೇಶ ದೊರೆಯಲಿದೆ.

ಡಾ.ಯತೀಶ್ ಉಳ್ಳಾಲ್, ಪುತ್ತೂರು ಉಪವಿಭಾಗೀಯ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net