ಈಜು ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಸಾಧನೆ

24Anand3
ವಿಜೇತ ಈಜುಗಾರರಾದ ಇಂದ್ರಜೀತ್ ಹಲ್ಗೇಕರ್ ಮತ್ತು ಲಕ್ಷ್ಮಣ ಕುಂಬಾರ.
Published on

ಬೆಳಗಾವಿ: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಈಜು ೆಡರೇಶನ್ ಆ್ ಇಂಡಿಯಾ ಈಚೆಗೆ ಆಯೋಜಿಸಿದ್ದ 20ನೇ ರಾಷ್ಟ್ರೀಯ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್‌ನಲ್ಲಿ ನಗರದ ಸ್ವಿಮ್ಮರ್ಸ್ ಕ್ಲಬ್ ಮಾಸ್ಟರ್ ಈಜುಗಾರರು 5 ಪದಕಗಳನ್ನು ಪಡೆದು ಸಾಧನೆ ಮೆರೆದಿದ್ದಾರೆ. ಈಜುಗಾರ ಇಂದ್ರಜೀತ್ ಹಲ್ಗೇಕರ್ 200 ಮೀಟರ್‌ನಲ್ಲಿ ಚಿನ್ನದ ಪದಕ ಮತ್ತು 50 ಮೀಟರ್ ಮತ್ತು 100 ಮೀಟರ್ ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ 2 ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಲಕ್ಷ್ಮಣ ಕುಂಬಾರ 50 ಮೀಟರ್ ಬಟರ್ ಪ್ಲೈಸ್ಟ್ರೋಕ್‌ನಲ್ಲಿ ಬೆಳ್ಳಿ ಮತ್ತು 50 ಮೀಟರ್ ಬ್ರೆಸ್ಟ್ರೋಕ್ ಸ್ಪರ್ಧೆಯಲ್ಲಿ 1 ಕಂಚಿನ ಪದಕ ಪಡೆದಿದ್ದಾರೆ. ವಿಜೇತ ಈಜುಗಾರರು ಕೆಎಲ್‌ಇ ಸಂಸ್ಥೆಯ ಜೆಎನ್‌ಎಂಸಿ ಈಜುಕೊಳ್ಳದಲ್ಲಿ ತರಬೇತುದಾರರಾದ ಉಮೇಶ ಕಲಘಟಗಿ, ಅಕ್ಷಯ ಶೇರೆಗಾರ, ಅಜಿಂಕ್ಯ ಮೆಂಡ್ಕೆ, ನಿತೀಶ ಕುಡುಚ್ಕರ್, ಗೋವರ್ಧನ್ ಕಾಕತ್ಕರ್ ಮತ್ತು ಇಮ್ರಾನ್ ಉಚಗಾಂವ್ಕರ್ ಅವರ ಮಾರ್ಗದರ್ಶನ ನೀಡಿದ್ದಾರೆ. ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಡಾ.ಪ್ರಭಾಕರ ಕೋರೆ, ಜಯಭಾರತ ೌಂಡೇಶನ್ ಅಧ್ಯಕ್ಷ ಜಯಂತ್ ಹುಂಬರವಾಡಿ, ಅವಿನಾಶ ಪೋತದಾರ, ಮಾನೆಕ್ ಕಪಾಡಿಯಾ, ಲತಾ ಕಿತ್ತೂರು, ಸುಧೀರ ಕುಸನೆ, ಪ್ರಸಾದ ತೆಂಡೋಲ್ಕರ್ ಈಜುಗಾರರಿಗೆ ಅಭಿನಂದನೆ ಸಲ್ಲಿಸಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net