ಈಜು ಸ್ಪರ್ಧೆಯಲ್ಲಿ ಏಳು ಪದಕ

27Anand2
ಮಹಾರಾಷ್ಟ್ರದ ಮಾಲ್ವಾನ್‌ನ ಚಿವ್ಲಾ ಬೀಚ್‌ನಲ್ಲಿ ಈಚೆಗೆ ಜರುಗಿದ 14ನೇ ರಾಜ್ಯಮಟ್ಟದ ಮುಕ್ತ ಈಜು ಸ್ಪರ್ಧೆಯಲ್ಲಿ ನಗರದ ಈಜು ಕ್ಲಬ್‌ನ ಈಜು ಪಟುಗಳು ಉತ್ತಮ ಪ್ರದರ್ಶನ ನೀಡಿ ಏಳು ಪದಕ ಪಡೆದುಕೊಂಡಿದ್ದಾರೆ. ವಿಜೇತ ವೇದಾಂತ ಮಿಸಳೆ, ಶರಣ್ಯ ಕುಂಬಾರ, ಸ್ಕಂದ್ ಘಾಟಗೆ, ಅನೀಶ ಪೈ, ಇಂದ್ರಜಿತ್ ಹಲಗೇಕರ್ ಇತರರಿದ್ದಾರೆ.
Published on

ಬೆಳಗಾವಿ: ಸಿಂಧದುರ್ಗ ಜಿಲ್ಲಾ ಅಕ್ವಾಟಿಕ್ ಅಸೋಸಿಯೇಷನ್ ವತಿಯಿಂದ ಮಹಾರಾಷ್ಟ್ರದ ಮಾಲ್ವಾನ್‌ನ ಚಿವ್ಲಾ ಬೀಚ್‌ನಲ್ಲಿ ಈಚೆಗೆ ಜರುಗಿದ 14ನೇ ರಾಜ್ಯಮಟ್ಟದ ಮುಕ್ತ ಈಜು ಸ್ಪರ್ಧೆಯಲ್ಲಿ ನಗರದ ಈಜು ಕ್ಲಬ್‌ನ ಈಜು ಪಟುಗಳು ಉತ್ತಮ ಸಾಧನೆ ಮೆರೆದಿದ್ದಾರೆ.

ವೇದಾಂತ ಮಿಸಳೆ, ಶರಣ್ಯ ಕುಂಬಾರ, ಸ್ಕಂದ್ ಘಾಟಗೆ, ಅನೀಶ ಪೈ, ಇಂದ್ರಜಿತ್ ಹಾಲಗೇಕರ್, ಶ್ರೀದತ್ತ ಪೂಜಾರಿ, ಅಹಿಕಾ ಹಲಗೇಕರ, ರೆತೇಮ್ ತ್ಯಾಗಿ, ಪಾಕ್ಹಿ ಹಲಗೇಕರ್, ರಾಘವಿ ಘಸ್ತಿ, ಕೌಸಿಕ್ ಪಂಡಿತ್ 3 ಚಿನ್ನ, 2 ಬೆಳ್ಳಿ ಮತ್ತು 2 ಕಂಚಿನ ಪದಕ ಸೇರಿ ಏಳು ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಈಜುಪಟುಗಳಿಗೆ ಕೆಎಲ್‌ಇ ಸುವರ್ಣ ಜೆಎನ್‌ಎಂಸಿ ಈಜುಕೊಳದಲ್ಲಿ ಉಮೇಶ್ ಕಲಘಟಗಿ, ಅಕ್ಷಯ್ ಶೇರೆಗಾರ್, ಅಜಿಂಕ್ಯ ಮೆಂಡ್ , ನಿತೀಶ ಕುಡುಚ್ಕರ್, ಗೋವರ್ಧನ್ ಕಾಕತ್ಕರ್, ಇಮ್ರಾನ್ ಉಚಗಾಂವ್ಕರ್, ಪ್ರಸಾದ ವೆರ್ಣೇಕರ ತರಬೇತಿ ನೀಡಿದ್ದಾರೆ.

ವಿಜೇತ ಈಜುಪಟುಗಳಿಗೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಜಯ ಭಾರತ್ ೌಂಡೇಶನ್ ಅಧ್ಯಕ್ಷ ಜಯಂತ ಹುಂಬರವಾಡಿ, ಅವಿನಾಶ ಪೋಡಿತದಾರ, ಮಾನೆಕ ಕಪಾಡಿಯಾ, ಲತಾ ಕಿತ್ತೂರು, ಸುಧೀರ ಕುಸನೆ, ಪ್ರಸಾದ ತೆಂಡೋಲ್ಕರ್ ಅಭಿನಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net