

ಮೈಸೂರು: ಕರ್ನಾಟಕ ರಾಜ್ಯ ಸ್ವಿಮ್ಮಿಂಗ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನ ಸೆಂಟರ್ ಆಫ್ ಸ್ಪೋರ್ಟ್ಸ್ ಎಕ್ಸಲೆನ್ಸ್ ಕೇಂದ್ರದಲ್ಲಿ ಮಂಗಳವಾರ ಮುಕ್ತಾಯಗೊಂಡ ರಾಜ್ಯಮಟ್ಟದ ಜೂನಿಯರ್ ಹಾಗೂ ಸಬ್ ಜೂನಿಯರ್ ವಿಭಾಗದ ಈಜು ಸ್ಪರ್ಧೆಯಲ್ಲಿ ಮೈಸೂರಿನ ಈಜು ಪಟುಗಳು ಪದಕ ಬೇಟೆಯಾಡಿ ಗಮನ ಸಳೆದಿದ್ದಾರೆ.
ನಗರದ ಗ್ಲೋಬಲ್ ಸ್ವಿಮ್ ಸೆಂಟರ್‌ನ ಜೀವಾಂಶ್ ಹಾಗೂ ರೀತಿ ಎಸ್. ರುತ್ವಾ ಜೂನಿಯರ್ ವಿಭಾಗದಲ್ಲಿ ತಲಾ ಮೂರು ಚಿನ್ನದ ಪದಕ ಪಡೆದುಕೊಂಡು ಮಿಂಚಿದ್ದಾರೆ. ಸೆಂಟರ್‌ನ ಒಟ್ಟು ಏಳು ಈಜು ಪಟುಗಳು ಸಬ್ ಜೂನಿಯರ್ ವಿಭಾಗದ ನಾಲ್ಕು ಕ್ಯಾಟಗರಿಯಲ್ಲಿ (13, 12, 11, 10 ವರ್ಷ ಒಳಪಟ್ಟವರು )ಸ್ಪರ್ಧಿಸಿ ಪದಕ ಪಡೆದುಕೊಂಡರು ಮುಖ್ಯ ತರಬೇತುದಾರ ಪವನ್‌ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೀವಾಂಶ್ 200 ಮೀ ಬಟರ್ ಫ್ಲೈ, 100 ಮೀ ಬಟರ್ ಫ್ಲೈ ಹಾಗೂ 50 ಮೀ. ಬಟರ್ ಬಟರ್ ಫ್ಲೈ ವಿಭಾಗಗಳಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ರೀತಿ ಎಸ್. ರುತ್ವಾ 50 ಮೀ. ಬಟರ್ ಫ್ಲೈ, 100 ಮೀ. ಬಟರ್ ಫ್ಲೈ ಹಾಗೂ 200 ಮೀ ಫ್ರೀಸ್ಟೈಲ್ನಲ್ಲಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದರು.
ಅಂತೆಯೇ ಎ. ಸಮೃದ್ 100 ಮೀ ಬಟರ್ ಫ್ಲೈನಲ್ಲಿ ಚಿನ್ನ, 200 ವಯಕ್ತಿಕ ಮಿಡ್ಲೆಯಲ್ಲಿ ಕಂಚು, 100 ಮೀ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಬೆಳ್ಳಿ ಪದಕ ಪಡೆದರು. ಸಾನ್ವಿ 100 ಮೀ. ಬಟರ್ ಫ್ಲೈನಲ್ಲಿ ಚಿನ್ನ, 200 ಮೀ ಫ್ರೀಸ್ಟೈಲ್ನಲ್ಲಿ ಬೆಳ್ಳಿ, 50 ಮೀ. ಬಟರ್ ಫ್ಲೈನಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ಎ.ಆದ್ರಿತ್ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಕಂಚು, 400 ಮೀ. ಫ್ರೀಸ್ಟೈಲ್ನಲ್ಲಿ ಬೆಳ್ಳಿ, ಎಚ್.ಎನ್. ನೇಹಸಿರಿ 50 ಮೀ. ಬಟರ್ ಫ್ಲೈ ಬೆಳ್ಳಿ, ಹರಿಕಾ ಎನ್ ನಾಯ್ಡು 100 ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಕಂಚಿನ ಪದಕ ಪಡೆದು ಗಮನ ಸಳೆದರು.