

ಸವದತ್ತಿ: ಪಟ್ಟಣದ ಬಂಡಿ ಓಣಿಯ ಯುವಕ ಸೋಮವಾರ ಈಜಲು ಹೋಗಿ ಮಲಪ್ರಭಾ ನದಿಯಲ್ಲಿ ಮೃತಪಟ್ಟಿದ್ದಾನೆ. ಸುಭಾಸ ಶಿಂಧೆ (35) ಮೃತಪಟ್ಟ ಯುವಕ. ಅಗ್ನಿಶಾಮಕ ದಳದ ಸಿಬ್ಬಂದಿ ಮಂಗಳವಾರ ಬೆಳಗ್ಗೆ ಮೃತದೇಹವನ್ನು ಹೊರತೆಗೆದಿದ್ದಾರೆ.
ಯುವಕ ಕುಡಿದ ಮತ್ತಿನಲ್ಲಿ ನದಿಯಲ್ಲಿ ಈಜಲು ಹೋಗಿ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಂ.ಕೆ. ಕಲಾದಗಿ, ಯು.ಸಿ. ಅಂಗಡಿ, ಎಸ್.ಎಂ. ಹೂಗಾರ, ವಿ.ಎಸ್. ತೋಡಕರ, ಕೆ.ಎಸ್. ಪಾಟೀಲ ಇದ್ದರು.