

ಕುಶಾಲನಗರ: ಸಮೀಪದ ದಂಡಿನಪೇಟೆಯಲ್ಲಿರುವ ಶಿಶುಪಾಲನಾ ಕೇಂದ್ರದ ಮಕ್ಕಳಿಗೆ ಮಾಜಿ ಶಾಸಕ ಅಪ್ಪಚ್ಚುರಂಜನ್ ಅವರು ಬುಧವಾರ ಸ್ವೆಟರ್ ವಿತರಿಸಿದರು.
ಕೊಡಗು ಜಿಲ್ಲೆಯಲ್ಲಿನ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸ್ವೆಟರ್ ವಿತರಿಸುವ ಯೋಜನೆ ಕೈಗೊಳ್ಳಲಾಗಿದೆ. ಮಳೆಗಾಲದ ವಾತಾವರಣದಲ್ಲಿ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆ ಬಹುಮುಖ್ಯ. ನಲಿ-ಕಲಿ ಎಂಬಂತೆ ಇಂದಿನ ಮಕ್ಕಳಿಗೆ ಆಟದೊಂದಿಗೆ ಪಾಠ ಕಲಿಸಲು ಇಂತಹ ಯೋಜನೆ ಪೂರಕ ಎಂದರು.
ಮಕ್ಕಳಿಗೆ ಶಾಸಕರು ಕಲಿಕಾ ಸಾಮಗ್ರಿ ನೀಡಿದರು. ಶಿಶುಪಾಲನಾ ಕೇಂದ್ರದ ಅಧ್ಯಕ್ಷೆ ಎಚ್.ಎಂ.ಹೇಮಲತಾ, ನದಿ ಸ್ವಚ್ಛತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕ ಎಂ.ಎನ್.ಚಂದ್ರ ಮೋಹನ್, ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಪ್ರಮುಖರಾದ ಸೋಮೇಶ್, ವೈಶಾಖ್, ಪ್ರವೀಣ್, ಕೇಂದ್ರದ ಶಿಕ್ಷಕಿ ರಂಜಿತಾ, ಸಹಾಯಕರಾದ ಕೃಪಾ, ಅಭಿಲಾಷ ಇದ್ದರು.