

ಹುಬ್ಬಳ್ಳಿ: ಧಾರವಾಡ ಕರೋಕೆ ವತಿಯಿಂದ ‘ಕನ್ನಡ ಗಾನ ಕೌಸ್ತುಭ 2020’ ಎರಡನೇ ಆವೃತ್ತಿ ಪ್ರಶಸ್ತಿಗಾಗಿ ಕನ್ನಡ ಚಿತ್ರಗೀತೆಗಳ ಸ್ಪರ್ಧೆಯನ್ನು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಟೀಲ್ ಪುಟ್ಟಪ್ಪ ಭವನದಲ್ಲಿ ಏರ್ಪಡಿಸಲಾಗಿತ್ತು. ಪ್ರಥಮ ಸ್ಥಾನ ಗಳಿಸಿದ ಬೆಳಗಾವಿಯ ಸ್ವಾತಿ ಸುತಾರ್ ಅವರಿಗೆ ‘ಕನ್ನಡ ಗಾನ ಕೌಸ್ತುಭ 2020’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಮಖಂಡಿಯ ಸುನಿಲ್ ದ್ವಿತೀಯ, ರಟ್ಟಿಹಳ್ಳಿಯ ಮನೋಜ ಹುಲಮನಿ ಮತ್ತು ಸವಣೂರಿನ ಮುಮ್ತಾಜ್ ಅಣ್ಣಿಗೇರಿ ತೃತೀಯ ಸ್ಥಾನ ಪಡೆದರು.
12 ಜಿಲ್ಲೆಗಳಿಂದ 150 ಸ್ಪರ್ಧಿಗಳು ಭಾಗವಹಿಸಿದ್ದರು. ಆಯೋಜಕರು 3 ಸುತ್ತುಗಳನ್ನು ಮಾಡಿ ಆಯ್ದ 18 ಸ್ಪರ್ಧಿಗಳನ್ನು ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಕೊನೆಯ ಸುತ್ತಿಗಾಗಿ ಕರೆತರಲಾಗಿತ್ತು.
ಶ್ರೀ ಬಸವಾನಂದ ಸ್ವಾಮೀಜಿ, ಸೈಯದ್ ಮೊಹದ್ದೀನ್ಷಾ ಮುಲ್ಲಾ, ರೆ. ಮೈಕಲ್ ಸೌಝಾ ಸಾನ್ನಿಧ್ಯ ವಹಿಸಿದ್ದರು. ಮನೋಜ ಕರ್ಜಗಿ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಮೈನುದ್ದೀನ್ ಕಿರುವಾಡಿ ಅಧ್ಯಕ್ಷತೆ ವಹಿಸಿದ್ದರು.
ಮಹನ್ಯ ಪಾಟೀಲ್, ಅವಂತಿ ಹೆಗಡೆ, ಗೋಕುಲ್ ರಾಜ್, ವನಿತಾ ಕೆ., ಅದೃಷ್ ಸಲಕಿನಕೊಪ್ಪ, ಎಂ.ಎಸ್. ಕಮ್ಮಾರ, ವೀರೇಶ ಸೇರಿ ಹಲವು ಪ್ರತಿಭೆ ಹಾಗೂ ಕಲಾವಿದರನ್ನು ಸನ್ಮಾನಿಸಲಾಯಿತು.
ಪಿಎಸ್ಐ ರತ್ನ ಬಿ., ಮೋಹನ ಅರ್ಕಸಾಲಿ, ಸಂತೋಷ ಪಟ್ಟಣಶೆಟ್ಟಿ, ಆನಂದ ದೇಶಪಾಂಡೆ ಅತಿಥಿಗಳಾಗಿ, ಡಾ. ಶ್ರೀಧರ ಕುಲಕರ್ಣಿ, ಶ್ರೀನಿವಾಸ ಕುಲಕರ್ಣಿ, ಸುಪ್ರಿಯಾ ಭಟ್, ಕು. ಅನುಷಾ ಮಂಜುನಾಥ ಸ್ವಾಮಿ, ಬಾಬಾಜಾನ್ ಮುಲ್ಲಾ ನಿರ್ಣಾಯಕರಾಗಿ ಆಗಮಿಸಿದ್ದರು.