

ಗಂಗಾವತಿ: ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಹೋರಾಟಗಾರರ ಕುಟುಂಬಗಳಿಗೆ ಗೌರವ ಸಲ್ಲಿಸಲಾಗುತ್ತಿದ್ದು, ನೆಲದ ಮಣ್ಣು ಮತ್ತು ಅಕ್ಷತೆಯನ್ನೊಳಗೊಂಡ ಅಮೃತ ಕಲಶ ದೆಹಲಿ ತಲುಪಲಿದೆ ಎಂದು ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಹೇಳಿದರು.
ನಗರದ ನಗರಸಭೆಯಲ್ಲಿ ಕೇಂದ್ರ ಸರ್ಕಾರದ ನಮ್ಮ ದೇಶ ನಮ್ಮ ಮಣ್ಣ ಪರಿಕಲ್ಪನೆಯ ಯೋಧರಿಗೆ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹೋರಾಟಗಾರರ ತ್ಯಾಗ, ಬಲಿದಾನದ ಲವಾಗಿ ಸ್ವಾತಂತ್ರ್ಯ ಪಡೆಯಲು ಸಾಧ್ಯವಾಗಿದೆ. ನಾವೆಲ್ಲ ವೀರಯೋಧರನ್ನು ಸ್ಮರಿಸಬೇಕಿದೆ. ಅಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ತಂತ್ರ್ಯ ಹೋರಾಟಗಾರರಿಗೆ ಸನ್ಮಾನಿಸುವ ಮೂಲಕ ಗೌರವ ಸಲ್ಲಿಸಲಾಗಿದೆ. ಹೋರಾಟಗಾರರ ಸವಿ ನೆನಪಿಗಾಗಿ ಶಿಲಾ ಲಕ ಅನಾವರಣಗೊಳಿಸಲಾಗಿದೆ. ಯುವಪೀಳಿಗೆ ಹೋರಾಟ ಮಹತ್ವ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿವಳಿಕೆ ಮೂಡಿಸಬೇಕಿದೆ ಎಂದರು.
ಸ್ವಾತಂತ್ರ್ಯ ಹೋರಾಟಗಾರ ಕುಟುಂಬದ ಸದಸ್ಯರಾದ ಗೌಳಿ ರಮೇಶ, ಅರಳಿ ಶೇಖರಪ್ಪ, ಭಾವಿಕಟ್ಟಿ ಬಸವರಾಜ, ನರಸಿಂಗರಾವ್ ಕುಲ್ಕರ್ಣಿ, ಅನಿಲ್ ಅಯೋಧ್ಯಾ, ವಿವೇಕಾನಂದ ರಾಂಭಟ್ ಜೋಶಿ, ಲಕ್ಷ್ಮಣ ಶಿವಯ್ಯ ಶ್ರೇಷ್ಟಿ ಅವರನ್ನು ಸನ್ಮಾನಿಸಲಾಯಿತು. ಆರೋಗ್ಯ ನಿರೀಕ್ಷಕ ಎ.ನಾಗರಾಜ್, ಕಂದಾಯ ನಿರೀಕ್ಷಕ ನಾಗರಾಜ್, ಲೆಕ್ಕಾಧಿಕಾರಿ ಮಂಜುನಾಥ, ವಿಷಯ ನಿರ್ವಾಹಕರಾದ ಬಸವರಾಜ ಸುಳಕೋಡ್, ನಾಗರತ್ನಮ್ಮ, ಹೊನ್ನರಾಜು ಇತರರಿದ್ದರು.