ದುಶ್ಚಟಮುಕ್ತರಾದಾಗ ಭವಿಷ್ಯ ಉಜ್ವಲ : ದಿನಕರ್ ಕುಂಭಾಶಿ ಹೇಳಿಕೆ

New Project (37)
Published on

ಮೂಡುಬಿದಿರೆ: ಮಕ್ಕಳು ಯಾವುದೇ ವ್ಯಸನಗಳಿಗೆ ಆಕರ್ಷಷಿತರಾಗದೆ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳಬೇಕು. ದುಶ್ಚಟಗಳಿಂದ ದೂರ ಇರಬೇಕು ಎಂದು ಮುಖ್ಯ ಶಿಕ್ಷಕ ದಿನಕರ್ ಕುಂಭಾಶಿ ಹೇಳಿದರು.

ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಅನುದಾನಿತ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೂಡಬಿದಿರೆ ವಕೀಲೆ ಸುಚಿತಾ, ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ತಿಳಿಸಿದರು.

ಸಂಪಿಗೆ ವಲಯದ ಜನಜಾಗೃತಿ ವೇದಿಕೆ ಅಧ್ಯಕ್ಷ ಟಿ.ಎನ್.ಕೆಂಬಾರೆ, ಸಂಪಿಗೆ ವಲಯದ ಮೇಲ್ವಿಚಾರಕ ಶ್ರೀನಿವಾಸ್ ಡಿ. ಉಪಸ್ಥಿತರಿದ್ದರು. ಸದಾಶಿವ ಉಪಾಧ್ಯಾಯ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net