ದುರಾಭ್ಯಾಸದಿಂದ ಬದುಕಿಗೆ ದುರಂತ: ವಿಮಲಾ ರಂಗಯ್ಯ ಅಭಿಮತ

swasthya sankalpa
ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷೆ ವಿಮಲಾ ರಂಗಯ್ಯ ಉದ್ಘಾಟಿಸಿದರು. ಪ್ರಮುಖರಾದ ರೇಖಾರಾಣಿ ಸೋಮಶೇಖರ್, ಗಣೇಶ್ ಆಚಾರ್ಯ, ಮಾಧವ ಚಾಂತಾಳ, ತೀರ್ಥರಾಮ ದೋಣಿಪಳ್ಳ ಉಪಸ್ಥಿತರಿದ್ದರು.
Published on

ಸುಬ್ರಹ್ಮಣ್ಯ: ಯುವ ಜನಾಂಗ ಸಮಾಜದ ಉತ್ತಮ ಗುಣ ನಡೆಗಳ ಸಂಪತ್ತಾಗಬೇಕು. ವ್ಯಸನಗಳಿಗೆ ದಾಸರಾದರೆ ಸಮಾಜದಲ್ಲಿ ಗೌರವ ನಾಶ ಮತ್ತು ಬದುಕಿನ ವಿನಾಶವಾಗುತ್ತದೆ. ದುಶ್ಚಟಗಳಿಗೆ ಅಧೀನರಾಗದೆ ಸಂಸ್ಕಾರವಂತರಾಗುವುದು ಅತ್ಯವಶ್ಯಕ. ದುರಭ್ಯಾಸ ಬದುಕು ದುರಂತವಾಗುತ್ತದೆ ಎಂಬ ಅರಿವು ಯುವಜನಾಂಗದ ಇರಬೇಕು ಎಂದು ಸುಳ್ಯ ತಾಲೂಕು ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷೆ ವಿಮಲಾ ರಂಗಯ್ಯ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಮತ್ತು ಎಸ್.ಎಸ್.ಪಿ.ಯು ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಶನಿವಾರ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ಗಣೇಶ್ ಆಚಾರ್ಯ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿಗಳಿಗೆ ದುಶ್ಚಟಗಳ ಪರಿಣಾಮದ ಬಗ್ಗೆ ಮಾಹಿತಿ ನೀಡಿ ಪ್ರತಿಜ್ಞಾ ವಿಧಿ ಬೋಧಿಸಿದರು.

ಅಧ್ಯಕ್ಷತೆ ಎಸ್‌ಎಸ್‌ಪಿಯು ಕಾಲೇಜಿನ ಆಯ್ಕೆ ಶ್ರೇಣಿ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್ ವಹಿಸಿದ್ದರು. ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಮಾಧವ ಚಾಂತಾಳ, ಒಕ್ಕೂಟಗಳ ವಲಯಾಧ್ಯಕ್ಷ ತೀರ್ಥರಾಮ ದೋಣಿಪಳ್ಳ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಬ್ರಹ್ಮಣ್ಯ ಒಕ್ಕೂಟ ಅಧ್ಯಕ್ಷೆ ಪವಿತ್ರಾ ದಿನೇಶ್, ವಿಪತ್ತು ನಿರ್ವಹಣಾ ಘಟಕದ ಸದಸ್ಯ ಸತೀಶ್ ಟಿ.ಎನ್, ಸುಬ್ರಹ್ಮಣ್ಯ ವಲಯದ ಮೇಲ್ವಿಚಾರಕ ಕೃಷ್ಣಪ್ಪ ಹಾಗೂ ಸೇವಾ ಪ್ರತಿನಿಧಿ ಹರಿಣಿ ಮಾಧವ ಗೌಡ ಉಪಸ್ಥಿತರಿದ್ದರು. ವಿದ್ಯಾರ್ಥಿ ಮೇಘನಾ ಸುಬ್ರಹ್ಮಣ್ಯ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net