ಸ್ವಾಸ್ಥೃಮಿತ್ರ ಪ್ರಶಸ್ತಿ ಪ್ರದಾನ

7
Published on

ಮೈಸೂರು: ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆರೋಗ್ಯ ಭಾರತಿ ವತಿಯಿಂದ ಧನ್ವಂತರಿ ಜಯಂತಿ ಅಂಗವಾಗಿ ‘ಸ್ವಾಸ್ಥೃಮಿತ್ರ ಪ್ರಶಸ್ತಿ’ ಪ್ರದಾನ ಸಮಾರಂಭ ನೆರವೇರಿತು.


ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಬಿ.ಎನ್.ಶಶಿಧರ, ಡಾ.ಕೆ.ವಿ.ಮಮತಾ, ಡಾ.ಗೌರಿಶಂಕರ, ಡಾ.ಪದ್ಯಾನ ಸುಬ್ರಹ್ಮಣ್ಯ ಭಟ್, ಡಾ.ಬಿ.ಎಸ್.ಶ್ರೀಧರ ಅವರಿಗೆ ‘ಸ್ವಾಸ್ಥೃಮಿತ್ರ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಶ್ರೀ ಶಿವಕಾಂತಾನಂದ ಸ್ವಾಮೀಜಿ, ಮೈಸೂರು ಆಯುರ್ವೇದ ವೈದ್ಯ ಸಂಘದ ಅಧ್ಯಕ್ಷ ಡಾ.ಬಿ.ಗುರುಬಸವರಾಜ, ಪ್ರಾಧ್ಯಾಪಕ ವೆಂಕಟಕೃಷ್ಣ, ಆರೋಗ್ಯ ಭಾರತಿ ಪ್ರಾಂತೀಯ ಕಾರ್ಯದರ್ಶಿ ಡಾ.ಎ.ಎಸ್.ಚಂದ್ರಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net