ಗಿಡಗಳ ಲಾಲನೆ, ಪಾಲನೆ ಮಾಡಿ

Swarnavalli Program
Published on

ಶಿರಸಿ: ಗಿಡ ನೆಡುವ ಜತೆಗೆ ಅವುಗಳ ಲಾಲನೆ, ಪಾಲನೆಯಲ್ಲೂ ನಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಕರೆ ನೀಡಿದರು.

ಮಠದ ಸಸ್ಯಲೋಕದಲ್ಲಿ  ಅರಣ್ಯ ಇಲಾಖೆಯಿಂದ ಆಯೋಜಿಸಿದ್ದ ಪವಿತ್ರ ವೃಕ್ಷಾರೋಪಣ ಕಾರ್ಯಕ್ರಮದಲ್ಲಿ ಕಿರಿಯ ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳ ಜತೆ ಗಿಡ ನೆಟ್ಟು ಅವರು ಮಾತನಾಡಿದರು.

ಮಠದ ಸಸ್ಯಲೋಕದಲ್ಲಿ ಸುಮಾರು 150 ಬೇರೆ ಬೇರೆ ಜಾತಿಯ ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಶಿರಸಿ ಡಿಎಫ್‌ಒ  ಡಾ. ಅಜ್ಜಯ್ಯ, ಎಸಿಎಫ್ ಹರೀಶ್, ಆರ್‌ಎಫ್‌ಒ ಶಿವಾನಂದ ಲಿಂಗಾಣಿ, ಮಠದ ಅಧ್ಯಕ್ಷ ವಿಘ್ನೇಶ್ವರ ಹೆಗಡೆ ಬೊಮ್ಮನಳ್ಳಿ, ಸೀತಾರಾಮ ಹೆಗಡೆ ನೀರ್ನಳ್ಳಿ, ಆರ್.ಎನ್. ಹೆಗಡೆ ಉಳ್ಳಿಕೊಪ್ಪ, ಅನಂತ ಅಶೀಸರ, ಮಹಾಬಲೇಶ್ವರ ಗುಮ್ಮನಿ, ಲಕ್ಷ್ಮೀನಾರಾಯಣ ಭಟ್ ಕಳಚೆ, ರತ್ನಾಕರ ಬಾಡಲಕೊಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net