ಕೃಷ್ಣ ಕಲರ್ ಲ್ಯಾಬ್ ತಂಡಕ್ಕೆ ಸ್ವರ್ಣ ಕಪ್

h27-cricket
Published on

ಹುಬ್ಬಳ್ಳಿ: ಹುಬ್ಬಳ್ಳಿ ಫೋಟೋ ಹಾಗೂ ವಿಡಿಯೋಗ್ರಾಫರ್ ಸಂಘದ ವತಿಯಿಂದ ಕ್ರಿಕೆಟ್ ಪೇಸ್ಟ್ ಸ್ವರ್ಣ ಕಪ್-2024 ಪಂದಾವಳಿಯು ಇಲ್ಲಿಯ ನೆಹರು ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ಸ್ವರ್ಣ ಗ್ರೂಪ್ ಆಫ್ ಕಂಪನಿಗಳ ಮಾಲೀಕ ಡಾ.ವಿ.ಎಸ್.ವಿ. ಪ್ರಸಾದ ಅವರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಗೆದ್ದವರಿಗೆ ಬಹುಮಾನ ವಿತರಿಸಿ ಮಾತನಾಡಿ, ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮನೋದೈಹಿಕ ಆರೋಗ್ಯ ಸದೃಢವಾಗಲಿದೆ. ಸಮಾಜದಲ್ಲಿಯೂ ಆರೋಗ್ಯಕರ ವಾತಾವರಣ ನಿರ್ಮಾಣವಾಗಲಿದೆ ಎಂದರು.
ಸಂಘದ ಅಧ್ಯಕ್ಷ ಕಿರಣ ಬಾಕಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಘದ ಸದಸ್ಯರು ಬಹಳ ಉತ್ಸಾಹದಿಂದ ಪಂದ್ಯಗಳನ್ನಾಡಿದ್ದಾರೆ.
ಇಂತಹ ಕ್ರೀಡೆಗಳಿಂದ ಆರೋಗ್ಯ ಹಿಡಿದಿಟ್ಟುಕೊಳ್ಳಬಹುದು ಎಂದರು.
ಕೃಷ್ಣ ಕಲರ್ ಲ್ಯಾಬ್ ತಂಡ ಸ್ವರ್ಣ ಕಪ್ ಮುಡಿಗೇರಿಸಿಕೊಂಡರೆ, ಜೈ ಶ್ರೀರಾಮ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು.
ಸಂಘದ ಉಪಾಧ್ಯಕ್ಷ ದಿನೇಶ ದಾಬಡೆ, ಕಾರ್ಯದರ್ಶಿ ರವೀಂದ್ರ ಕಾಟಿಗರ, ಮಹಾವೀರ ಜೈನ್, ಲಲಿತ್ ಜೈನ್, ವಿಜಯಪೂಜಾರಿ, ವಿಶಾಲ ಪೂಜಾರಿ, ಕೃಷ್ಣ ಪೂಜಾರಿ, ಆನಂದ ಮೆಹರವಾಡೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net