ಡಿ.8ಕ್ಕೆ ಸ್ವರನಮನ ಕಾರ್ಯಕ್ರಮ ; ಪಂ.ಕಾಶೀನಾಥ ಪತ್ತಾರ ಗಾಯನ-ವಾದನ

swara
Published on

ಬೆಂಗಳೂರು: ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಶನ್ ಟ್ರಸ್ಟ್ ಮತ್ತು ತ್ಯಾಗರಾಜನಗರ ದತ್ತಾತ್ರೇಯ ದೇವಸ್ಥಾನ ಟ್ರಸ್ಟ್ ಜಂಟಿ ಸಹಯೋಗದಲ್ಲಿ ಶ್ರೀಮತಿ ಸರಸ್ವತಿ ಮತ್ತು ದತ್ತಾತ್ರೇಯ ಹಂಪಿಹೊಳಿ ಸ್ಮರಣಾರ್ಥ ಡಿ.8ಕ್ಕೆ ಸ್ವರನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ತ್ಯಾಗರಾಜನಗರದ ದತ್ತಾತ್ರೇಯ ದೇವಸ್ಥಾನದ ಆವರಣದಲ್ಲಿ ಡಿ.8 (ಭಾನುವಾರ) ಸಂಜೆ 5.30ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಗಾಯನ ಮತ್ತು ವಾದನ ಇರಲಿದೆ. ಪ್ರಸಿದ್ಧ ಗಾಯಕ ಪಂ.ಕಾಶೀನಾಥ ಪತ್ತಾರ ಹಿಂದೂಸ್ಥಾನಿ ಗಾಯನ, ಭಕ್ತಿಸಂಗೀತ ನಡೆಸಿಕೊಡಲಿದ್ದಾರೆ. ಪಂ.ಸತೀಶ ಹಂಪಿಹೊಳಿ, ಪಂ.ಶಿವಕುಮಾರ್ ಮಹಾಂತ, ಪಂ.ಅಮೃತೇಶ ಕುಲಕರ್ಣಿ, ಪುನೀತ್ ರಾಣಾಪೂರ್, ಅಮಿತ್ ಭಟ್ ತಬಲಾ ವಾದನ ನೀಡಲಿದ್ದು, ನಾಗೇಂದ್ರ ರಾಣಾಪೂರ್, ವಿನೀತ್ ರಾಣಾಪೂರ್ ವೀಣಾವಾದನ ನಡೆಸಿಕೊಡಲಿದ್ದಾರೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಖ್ಯಾತ ಮನೋರೋಗ ತಜ್ಞ ಪದ್ಮಶ್ರೀ ಡಾ.ಸಿ.ಆರ್.ಚಂದ್ರಶೇಖರ್, ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷ ವಿದುಷಿ ಶುಭಾ ಧನಂಜಯ, ಕಥಕ್ ನೃತ್ಯ ಕಲಾವಿದೆ ವಿದುಷಿ ಪೂರ್ಣಾ ಆಚಾರ್ಯ ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net