ಮೈಸೂರಿನಲ್ಲಿ ಡಿ. 12ರಂದು ಸ್ವರ ಸಂಭ್ರಮ

Published on

ಮೈಸೂರು: ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತಿನಿಂದ ಡಿ.12ರಂದು ಸ್ವರ ಸಂಭ್ರಮ ಕರೋಕೆ ಗಾಯನ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಖಜಾಂಚಿ ತೇಜಸ್ ಪೃಥ್ವಿರಾಜ್ ತಿಳಿಸಿದರು. ನಗರದ ಪುರಭವನದಲ್ಲಿ ಅಂದು ಬೆಳಗ್ಗೆ 11ರಿಂದ ರಾತ್ರಿ 8 ಗಂಟೆ ವರೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಹಾಡುವ ಪ್ರತಿಭೆ ಇದ್ದರೂ ಸೂಕ್ತ ವೇದಿಕೆ ದೊರೆಯುತ್ತಿಲ್ಲ ಎಂಬುವವರಿಗೆ ಇದು ಉತ್ತಮ ಅವಕಾಶವಾಗಿದೆ. ಆಸಕ್ತರು ಡಿ.10ರ ಒಳಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಆಯೋಜಕರಾದ ಡಾ.ಮೌಲ್ಯ ಜಯಕುಮಾರ್, ಅಮೀನಾ ಬೇಗಂ, ಹೇಮಲತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net