

ಹುಬ್ಬಳ್ಳಿ: ಧಾರವಾಡದ ಆಲೂರು ವೆಂಕಟರಾವ ಸಂಸ್ಕೃತಿ ಸಭಾ ಭವನದಲ್ಲಿ ಇತ್ತಿಚೆಗೆ ಸ್ವರಲಯಾರಾಧನೆ ಸಂಗೀತ ಸಂಸ್ಥೆ ಮತ್ತು ಸುಮಧ್ವ ಸಂಗೀತ ವಿದ್ಯಾಲಯದ ವಾರ್ಷಿಕ ಸಂಗೀತೋತ್ಸವ ಕಾರ್ಯಕ್ರಮ ಏರ್ಪಾಟಾಗಿತ್ತು.
ಹಿಂದುಸ್ತಾನಿ ಶಾಸ್ತ್ರೀಯ ಗಾಯನವನ್ನು ಸಾಗರದ ವಿದುಷಿ ವಸುಧಾ ಶರ್ಮಾ ಅವರು ರಾಗ ಮಾಲಕೌಂಸ ಹಾಗೂ ಭಜನ್ ಪ್ರಸ್ತುತ ಪಡಿಸಿದರು. ಬೆಂಗಳೂರಿನ ಯುವ ಪ್ರತಿಭೆ ಮಾಸ್ಟರ್ ಪ್ರದ್ಯುಮ್ನ ತಬಲಾ ಸೋಲೋ ಸಾದರಪಡಿಸಿದರು. ಸಂಸ್ಥೆಯ ಅಧ್ಯಕ್ಷ ಜಯತೀರ್ಥ ಪಂಚಮುಖಿ, ಕಾರ್ಯದರ್ಶಿ ವೈಷ್ಣವಿ ಪಂಚಮುಖಿ, ಪ್ರಸನ್ನ ಜೊಶಿ ಇತರರು ಭಾಗವಹಿಸಿದ್ದರು.