ಶೋತೃಗಳ ಮನತಣಿಸಿದ ಹಂಸಗೀತೆ ಸಂಗೀತ ರಸಸಂಜೆ

music programme
Published on

ಮೈಸೂರು: ನಗರದ ಡಾ.ರಾಜ್‌ಕುಮಾರ್ ಕಲಾ ಸೇವಾ ಟ್ರಸ್ಟ್ ವತಿಯಿಂದ ಅಶಕ್ತ ಮತ್ತು ಅನಾರೋಗ್ಯ ಪೀಡಿತ ಕಲಾವಿದರ ಕಲ್ಯಾಣ ನಿಧಿಗಾಗಿ ಕಲಾಮಂದಿರದಲ್ಲಿ ಕಲಾವಿದರ ಸಹಾಯಾರ್ಥವಾಗಿ ಇತ್ತೀಚೆಗೆ ಆಯೋಜಿಸಿದ್ದ ನಾದಬ್ರಹ್ಮ ಹಂಸಲೇಖ ರಚಿತ ಹಾಡುಗಳ ಹಂಸಗೀತೆ ಸಂಗೀತ ರಸಸಂಜೆ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು.

ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಉದ್ಘಾಟಿಸಿ ಮಾತನಾಡಿ, ಸಂಗೀತ ಲಲಿತ ಕಲೆಗಳಲ್ಲಿ ಒಂದಾಗಿದ್ದು, ವಿಶಿಷ್ಟ ಹಾಗೂ ವ್ಯಾಪಕ ಕಲೆಯಾಗಿದೆ. ಸಂಗೀತವೆಂಬುದು ಅತ್ಯುನ್ನತ ಹೊಳಪು. ಸಂಗೀತ ದೈವೀ ಕಲೆಯಾಗಿದ್ದು, ಭಗವಂತನ ಸಾಕ್ಷಾತ್ಕಾರದ ಸ್ವರೂಪಿತ ಸಾಧನ. ಏನಿಲ್ಲವಾದರೂ ನಮ್ಮ ಹೃದಯಕ್ಕೆ ರಸಮತೆ ಉಂಟು ಮಾಡುತ್ತದೆ. ಮನಸ್ಸನ್ನು ಪ್ರಪುಲ್ಲಗೊಳಿಸುತ್ತದೆ. ಅಲ್ಲದೆ, ಇದೊಂದು ಉಲ್ಲಾಸದ ಮಾಧ್ಯಮವಾಗಿದ್ದು, ನಮ್ಮ ಚಿತ್ತವನ್ನು ಅರಳಿಸಿ, ಮರುಳು ಮಾಡುತ್ತದೆ. ಸಂಗೀತ ಎಲ್ಲ ರಸಗಳಿಗೂ ಕಿರೀಟಪ್ರಾಯವಾದ ಶಾಂತರಸದ ಅನುಭೂತಿಯನ್ನುಂಟು ಮಾಡುತ್ತದೆ. ಸಂಗೀತಕ್ಕೆ ರೋಗ ನಿರಸನ ಶಕ್ತಿಯೂ ಉಂಟು ಎಂದು ಸಂಗೀತದ ಮಹತ್ವ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net