

ಗದಗ: ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಸ್ಥಳೀಯ ಕೆ ಎಚ್ ಪಾಟೀಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಕ್ರೀಡಾಕೂಟದಲ್ಲಿ ಸ್ಥಳೀಯ ಸ್ವಾಮಿ ವಿವೇಕಾನಂದ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಅಭೂತಪೂರ್ವ ಯಶಸ್ಸನ್ನು ಗಳಿಸಿದ್ದಾರೆ. ಬಾಲಕಿಯರ ಫೀಲ್ಡ್ ಇವೆಂಟ್ ಗಳಲ್ಲಿ ಕುಮಾರಿ ಗಾಯತ್ರಿ ಚಿಕ್ಕಮಠ ಉದ್ದ ಜಿಗಿತ, ತ್ರಿವಿಧ ಈ(ಟ್ರಿಪಲ್ ) ಜಿಗಿತ ಹಾಗೂ 100 ಮೀಟರ್ ಹರ್ಡಲ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದು ಸಮಗ್ರ ವೀರಾಗ್ರಣಿ ಯಾಗಿ ಹೊರಹೊಮ್ಮಿದ್ದಾಳೆ. ಅದೇ ರೀತಿ ಕುಮಾರಿ ನಿವೇದಿತಾ ಮಡಿವಾಳರ್ ಎತ್ತರ ಜಿಗಿತ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ,100 ಮೀಟರ್ ಹರ್ಡಲ್ಸ್ ನಲ್ಲಿ ತೃತೀಯ ಸ್ಥಾನ ,ಕುಮಾರಿ ರಶ್ಮಿ ಮುರಗಿಮಠ ಕ್ರಾಸ್ ಕಂಟ್ರಿ ( 3 ಕಿ.ಲೋ ಮೀ)ಯಲ್ಲಿ ಪ್ರಥಮ ಸ್ಥಾನ,ಕುಮಾರಿ ಮೆಹರುನ್ನಿಸಾ ನದಾಫ್ , ಕುಮಾರಿ ತಮನ್ನಾ ಧಾರವಾಡ 400 ಮೀ ಹರಡಲ್ಸ್ ನಲ್ಲಿ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಬಾಲಕಿಯರ ಗುಂಪು ಆಟಗಳಲ್ಲಿ ಕಬಡ್ಡಿ ಪ್ರಥಮ ಸ್ಥಾನ ಹಾಗೂ 4X100 ರೀಲೆ ದ್ವಿತೀಯ ಸ್ಥಾನ ಹೊಂದಿದ್ದಾರೆ. ಸಾಧನೆಗೈದ ಎಲ್ಲ ವಿದ್ಯಾರ್ಥಿನಿಯರನ್ನು ಕಾಲೇಜಿನ ಆಡಳಿತ ಮಂಡಳಿಯ ಚೇರಮನರು, ಅಧ್ಯಕ್ಷರು, ಸರ್ವಸದಸ್ಯರು,ಪ್ರಾಚಾರ್ಯರು,ಹಾಗೂ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿ, ಶುಭ ಹಾರೈಸಿದ್ದಾರೆ.