

ಗುರುಪುರ: ಪೊಳಲಿ ರಾಮಕೃಷ್ಣ ತಪೋವನಕ್ಕೆ ಭಾನುವಾರ ಬೇಲೂರು ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಉಪಾಧ್ಯಕ್ಷ ಶ್ರೀಮತ್ ಸ್ವಾಮಿ ಸುಹಿತಾನಂದಾಜಿ ಮಹಾರಾಜ್ ಭೇಟಿ ನೀಡಿದರು.
ಅವರೊಂದಿಗೆ ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದಾಜಿ ಮಹಾರಾಜ್, ಮಂಗಳೂರು ರಾಮಕೃಷ್ಣ ಮಠದ ಉಪಾಧ್ಯಕ್ಷ ಸ್ವಾಮಿ ಜಿತಕಾಮಾನಂದಾಜಿ ಮಹಾರಾಜ್, ಅಲ್ಸೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಬೋಧಸ್ವರೂಪಾನಂದಾಜಿ ಮಹಾರಾಜ್ ಮತ್ತು ಇತರ ರಾಮಕೃಷ್ಣ ಮಠಗಳ ಸ್ವಾಮೀಜಿ ಇದ್ದರು. ಅವರನ್ನು ಪೊಳಲಿ ರಾಮಕೃಷ್ಣ ತಪೋವನದ ಅಧ್ಯಕ್ಷ ವಿವೇಕ ಚೈತನ್ಯಾನಂದ ಸ್ವಾಮೀಜಿ ಆಶ್ರಮಕ್ಕೆ ಬರಮಾಡಿಕೊಂಡರು.
ರಾಮಕೃಷ್ಣ ಮಠಕ್ಕೆ ಸಂಬಂಧಿಸಿದ ಹಿರಿಯ ಸ್ವಾಮೀಜಿಗಳ ಭೇಟಿ ಅತಿ ಮಹತ್ವದ ಹಾಗೂ ಸ್ಮರಣೀಯ ಎಂದು ವಿವೇಕ ಚೈತನ್ಯಾನಂದ ಸ್ವಾಮೀಜಿ ಹೇಳಿದರು.. ಸ್ವಾಮೀಜಿಯವರು ಆಶ್ರಮದ ಭಕ್ತರು ಹಾಗೂ ವಿದ್ಯಾರ್ಥಿಗಳನ್ನು ಆಶೀರ್ವದಿಸಿದರು. ಬಳಿಕ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.