ಸಾವಿರಾರು ಜನರ ಹಾರೈಕೆ

21-DVD-3
Published on

ದೇವದುರ್ಗ: ಸಾಮೂಹಿಕ ವಿವಾಹ ಆಯೋಜನೆ ಪುಣ್ಯದ ಕೆಲಸವಿದ್ದಂತೆ ಎಂದು ಮಾಜಿ ಸಚಿವ ರಾಜೂಗೌಡ ಹೇಳಿದರು.

ಜಾಲಹಳ್ಳಿ ಶ್ರೀಲಕ್ಷ್ಮೀರಂಗನಾಥ ದೇವಸ್ಥಾನದಲ್ಲಿ ಶ್ರೀಲಕ್ಷ್ಮೀ ರಂಗನಾಥ ಗೋವಿಂದ ಸೇವಾ ಸಮಿತಿಯಿಂದ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಜೋಡಿಗಳಿಗೆ ವಿವಿಧ ಮಠದ ಸ್ವಾಮೀಜಿಗಳ ಆಶೀರ್ವಾದೊಂದಿಗೆ ಸಾವಿರಾರು ಜನರ ಹಾರೈಕೆ ಸಿಗಲಿದೆ ಎಂದರು.

ಗೋವಿಂದ ಸೇವಾ ಸಮಿತಿ ಕಳೆದ 11ವರ್ಷಗಳಿಂದ ಸಾಮೂಹಿಕ ವಿವಾಹದಂಥ ಪುಣ್ಯಕಾರ್ಯ ಮಾಡುತ್ತಾ ಬಂದಿದೆ. ನನ್ನ ಕಡೆಯಿಂದ ಕಿರು ಕಾಣಿಕೆ ಎನ್ನುವಂತೆ ಬಟ್ಟೆ ಕೊಡಿಸುತ್ತಿದ್ದೇನೆ. ಇಂಥ ಕಾರ್ಯಕ್ಕೆ ನಾನು ಜೀವ ಇರುವವರೂ ಸಹಾಯ ಮಾಡುತ್ತೇನೆ. ಗ್ರಾಮದ ಮಗನಾಗಿ ಸೇವೆ ಮಾಡಲು ಸದಾ ಸಿದ್ಧನಿದ್ದೇನೆ ಎಂದು ರಾಜೂಗೌಡ ಹೇಳಿದರು.

55 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಜಯಶಾಂತಮಠದ ಶ್ರೀ ಜಗದಾರಾಧ್ಯ ಜಯಶಾಂತ ಶಿವಾಚಾರ್ಯ ಸ್ವಾಮೀಜಿ, ಮಂದಕಲ್ ಗ್ರಾಮದ ಬಸವರಾಜ ರಾಜಗುರು, ವೀರಗೋಟದ ಅಡವಿಲಿಂಗ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ತಾಪಂ ಇಒ ಬಸವರಾಜ ಹಟ್ಟಿ, ಸಹಾಯಕ ನಿರ್ದೇಶಕ ಅಣ್ಣರಾವ್, ಕಂದಾಯ ನಿರೀಕ್ಷಕ ದೇವರೆಡ್ಡಿ, ಕರಡಿಗುಡ್ಡ ಗ್ರಾಪಂ ಅಧ್ಯಕ್ಷ ಲಿಂಗರಾಜ ಪಾಟೀಲ್, ಪಿಡಿಒ ನರಸಪ್ಪ, ಗಂಗಪ್ಪಯ್ಯ ಪೂಜಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net