ಕಾಣೆಯಾಗಿದ್ದ ಸನ್ಯಾಸಿ ಸಂಸಾರಿಯಾಗಿ ಪತ್ತೆ: ಮಂಗಳೂರು ಬಳಿ ಯವತಿಯೊಂದಿಗೆ ಸಿಕ್ಕಿಬಿದ್ದ ಸ್ವಾಮೀಜಿ

Swamiji
Published on

ಕೋಲಾರ: ಕೆಲ ದಿನಗಳ ಹಿಂದೆ ಕಾಣೆಯಾಗಿದ್ದ ಸನ್ಯಾಸಿಯೊಬ್ಬ ಇದೀಗ ದಿಢೀರನೇ ಸಂಸಾರಿಯಾಗಿ ಪತ್ತೆಯಾಗಿರುವ ಘಟನೆ ಕೋಲಾರ ತಾಲ್ಲೂಕಿನ ಹೊಳಲಿ ನಡೆದಿದೆ.

ಫೆ.27ರಂದು ಹೊಳಲಿ ಭೀಮಲಿಂಗೇಶ್ವರ ಸೇವಾಶ್ರಮದ ಪೀಠಾಧಿಪತಿ ದತ್ತಾತ್ರೇಯ ಅವದೂತ ಸ್ವಾಮಿ, ತಮ್ಮದೇ ಗ್ರಾಮದ 20 ವರ್ಷದ ಯುವತಿಯೊಂದಿಗೆ ನಾಪತ್ತೆಯಾಗಿದ್ದರು. ಈ ಕುರಿತು ಯುವತಿಯ ಪಾಲಕರು ಸಹ ಕೋಲಾರ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು.

ಇದೀಗ ಯುವತಿಯನ್ನು ಮದುವೆಯಾಗಿ ಪತ್ತೆಯಾಗಿರುವ ಸ್ವಾಮೀಜಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಅಂದಹಾಗೆ ಸ್ವಾಮೀಜಿ ಯುವತಿಯೊಂದಿಗೆ ಮಂಗಳೂರು ಬಳಿ ಸಿಕ್ಕಿಬಿದ್ದಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net