

ಬೆಳಗಾವಿ:ರಾಜ್ಯದ ಜನತೆ ನಿಮ್ಮ ಮೇಲೆ ಹೊಸ ಭರವಸೆ ಇಟ್ಟುಕೊಂಡಿದ್ದು,ತಾಳ್ಮೆ, ಸಹನೆ, ಜಾಣ್ಮೆಯಿಂದ ಅವರ ಮನ ಗೆಲ್ಲಲ್ಲಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾದ ಮಾಡಿದರು.
ಬುಧವಾರ ಬೆಂಗಳೂರಿನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಿವಾಸಕ್ಕೆ ಶ್ರೀಗಳು ಭೇಟಿ ನೀಡಿ ಆಶೀರ್ವಾದ ಮಾಡಿ ಮಾತನಾಡಿದರು.
ಹುಟ್ಟು ಹೋರಾಟಗಾರ್ತಿಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಾಳ್ಮೆ, ಜಾಣ್ಮೆ, ಸಹನೆಯಿಂದ ತಮಗೆ ನೀಡಿರುವ ಸ್ಥಾನದಲ್ಲಿ ಅಪರೂಪವಾದ ಕಾರ್ಯವನ್ನು ಮಾಡಿ ಕರ್ನಾಟಕದ ಜನರ ಮನಸ್ಸನ್ನು ಗೆಲ್ಲಲ್ಲಿ ಎಂದು ಶ್ರೀಗಳು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಶಾಲು ಹೊದಿಸಿ, ಗ್ರಂಥ ನೀಡಿ ಆಶೀರ್ವದಿಸಿದರು.
ಎಂಎಲ್ ಸಿ ಚನ್ನರಾಜ ಹಟ್ಟಿಹೊಳಿ, ವೀರುಪಾಕ್ಷಯ್ಯ ನೀರಲಗಿಮಠ, ಎಂ.ಕೆ.ಹುಬ್ಬಳ್ಳಿಯ ಕಲ್ಲಪ್ಪ ಬೋರಣ್ಣವರ, ಮಂಜುನಾಥ ಅಳವಣಿ ಇತರರಿದ್ದರು.